For the best experience, open
https://m.samyuktakarnataka.in
on your mobile browser.

ಸಂಸತ್ ಅಧಿವೇಶನ: ಸೀಟ್​ನಲ್ಲಿ ಕಂತೆ ಕಂತೆ ನೋಟು ಪತ್ತೆ.. ..

01:32 PM Dec 06, 2024 IST | Samyukta Karnataka
ಸಂಸತ್ ಅಧಿವೇಶನ  ಸೀಟ್​ನಲ್ಲಿ ಕಂತೆ ಕಂತೆ ನೋಟು ಪತ್ತೆ

ನವದೆಹಲಿ: ಸಂಸತ್ ಚಳಿಗಾಲದ ಅಧಿವೇಶನದ ನಡೆಯುತ್ತಿದ್ದು. ರಾಜ್ಯಸಭಾ ಸದಸ್ಯರೊಬ್ಬರ ಸೀಟಿನಡಿ ಕಂತೆ ಕಂತೆ ಹಣ ಪತ್ತೆಯಾಗಿರುವ ಘಟನೆ ನಡೆದಿದೆ ಎಂದು ಸಭಾಪತಿ ಜಗದೀಪ್ ಧನಕರ್ ತಿಳಿಸಿದ್ದಾರೆ.
ರಾಜ್ಯಸಭಾ ಸಂಸದರ ಸೀಟಿನ ಸಂಖ್ಯೆ 222 ರ ಅಡಿಯಲ್ಲಿ 500 ರೂ ನೋಟುಗಳ ಬಂಡಲ್ ಪತ್ತೆಯಾಗಿದೆ. ತೆಲಂಗಾಣದಿಂದ ಕಾಂಗ್ರೆಸ್​ ಸಂಸದರಾಗಿ ಆಯ್ಕೆಯಾಗಿರುವ ಅಭಿಷೇಕ್ ಮನುಸಿಂಘ್ವಿ ಅವರು ಕುಳಿತುಕೊಳ್ಳುವ ಸೀಟಿನಲ್ಲಿ ಹಣವಿತ್ತು ಎಂದು ಹೇಳಿದರು,
ಸಭಾಪತಿ ಧಂಖರ್ ಅವರ ಈ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಸಂಸದರು ಸದನದಲ್ಲಿ ಪ್ರತಿಭಟನೆ ನಡೆಸಿದರು. ತನಿಖೆಗೆ ಮುನ್ನ ಹೆಸರು ಹೇಳಬಾರದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಆರೋಪ ಅಲ್ಲಗಳೆದ ಅಭಿಷೇಕ್ ಮನು ಸಿಂಘ್ವಿ : ರಾಜ್ಯಸಭೆಗೆ ಹೋದಾಗಲೆಲ್ಲ 500 ರೂಪಾಯಿ ಮಾತ್ರ ತರುತ್ತೇನೆ, ಮಧ್ಯಾಹ್ನ 12.57ಕ್ಕೆ ಸದನ ತಲುಪಿದೆ ನಂತರ ಕ್ಯಾಂಟೀನ್​ನಲ್ಲಿ ಅಯೋಧ್ಯ ಸಂಸದ ಎಂಪಿ ಅವಧೇಶ್ ಪ್ರಸಾದ್​​ರೊಂದಿಗೆ 1.30ರವರೆಗೆ ಕುಳಿತುಕೊಂಡಿದ್ದೆ ಎಂದು ಸಿಂಘ್ವಿ ಹೇಳಿದ್ದಾರೆ.

Tags :