For the best experience, open
https://m.samyuktakarnataka.in
on your mobile browser.

ಸಿದ್ದನಕೊಳ್ಳ ಮಠದಿಂದ ಅತಿರಥ ಮಹಾರಥರಿಗೆ ಪ್ರಶಸ್ತಿ ಘೋಷಣೆ

12:46 PM Nov 29, 2024 IST | Samyukta Karnataka
ಸಿದ್ದನಕೊಳ್ಳ ಮಠದಿಂದ ಅತಿರಥ ಮಹಾರಥರಿಗೆ ಪ್ರಶಸ್ತಿ ಘೋಷಣೆ

ಇಳಕಲ್ : ತಾಲೂಕಿನ ಕಲಾ ಮಠದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದ ಸಿದ್ದನಕೊಳ್ಳದ ಕಲಾ ಮಠದಿಂದ ನಾಲ್ವರು ಅತಿರಥ ಮಹಾರಥರಿಗೆ ಪ್ರಶಸ್ತಿಗಳನ್ನು ಡಾ ಶಿವಕುಮಾರ ಸ್ವಾಮಿಜಿ ಘೋಷಣೆ ಮಾಡಿದ್ದಾರೆ.
ಪ್ರತಿವರ್ಷ ಸಂಕ್ರಮಣ ಸಮಯದಲ್ಲಿ ಕೊಡುವ ಸಿದ್ದಶ್ರೀ ಪ್ರಶಸ್ತಿಗೆ ಭೈರತಿ ರಣಗಲ್ಲ , ಕಬ್ಜ, ಕೆಜಿಎಫ್ ಚಿತ್ರಗಳ ಸಾಹಿತಿ ಕಿನ್ನಾಳ ರಾಜು ಇವರು ಆಯ್ಕೆಯಾಗಿದ್ದಾರೆ. ಅದೇ ರೀತಿ ಈ ವರ್ಷದಿಂದ ಹೊಸದಾಗಿ ಕೊಡಲು ನಿಶ್ಚಯಿಸಲಾದ ರಾಷ್ಟ್ರೀಯ ಪ್ರಶಸ್ತಿಗಳಿಗೆ ಹಿಂದಿ ಚಿತ್ರನಟ ನಾನಾ ಪಾಟೇಕರ, ಕೆಜಿಎಫ್ ಮುಂತಾದ ಹಿಟ್ ಚಿತ್ರಗಳ ನಿರ್ದೇಶಕ ರವಿ ಬಸ್ರೂರ , ಮತ್ತು ಜಾನಪದ ಲೋಕದ ಮಹಾನ್ ಪ್ರತಿಭೆ ಮಂಜಮ್ಮ ಜೋಗತಿ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಡಾ ಶಿವಕುಮಾರ ಸ್ವಾಮಿಗಳು ತಿಳಿಸಿದ್ದಾರೆ.