ಸಿದ್ದರಾಮಯ್ಯ ಹುಲಿ ಇದ್ದಂಗೆ.. ಹೆದರುವ ಪ್ರಶ್ನೆ ಇಲ್ಲ
ಹುಬ್ಬಳ್ಳಿ : ಮುಡಾ ನಿವೇಶನ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪಾತ್ರ ಏನೂ ಇಲ್ಲ. ಬಿಜೆಪಿಯವರು ರಾಜಕೀಯ ದುರುದ್ದೇಶದಿಂದ ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಡಿಸಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಹೆದರುವುದಿಲ್ಲ. ನಮ್ಮ ಸಿಎಂ ಟಗರು, ಹುಲಿ ಇದ್ದಂಗೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಒಬ್ಬ ಪ್ರಬಲ ನಾಯಕರು. ಅವರ ಮೇಲೆ ಆರೋಪ ಹೊರಿಸಿ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದರೆ ರಾಜ್ಯದಲ್ಲಿ ಕಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ ಎಂಬ ಲೆಕ್ಕಾಚಾರ ಬಿಜೆಪಿಯವರದು. ಆದರೆ, ಮುಖ್ಯಮಂತ್ರಿ ಇಂತಹ ನಿರಾಧಾರ ಆರೋಪಕ್ಕೆ ಹೆದರಿ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದು ಸಚಿವ ಜಮೀರ್ ಸಮರ್ಥಿಸಿಕೊಂಡರು.
ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಗೆ ನಾನು ಕಾರಣವಲ್ಲ :
ನಟ ದರ್ಶನ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿರುವುದು ಜೈಲು ಪ್ರಾಧಿಕಾರ, ಪೊಲೀಸರು. ನಾನಲ್ಲ. ಅವರ ಮೇಲೆ ಕೊಲೆ ಆರೋಪ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿನ ವಿಡಿಯೋ, ಪೋಟೊ ಗಳು ಹೊರ ಬಂದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಕಳಿಸಿದ್ದಾರೆ. ಇದಕ್ಕೆ ನಾನು ಹೇಗೆ ಕಾರಣ ಆಗುತ್ತೇನೆ? ನಾನೇಕೆ ಹೋಗಿ ಭೇಟಿ ಮಾಡುತ್ತೇನೆ? ಎಂದು ಪ್ರಶ್ನಿಸಿದರು.