For the best experience, open
https://m.samyuktakarnataka.in
on your mobile browser.

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

11:16 AM Dec 20, 2024 IST | Samyukta Karnataka
ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಒಬ್ಬ ತಾಯಿ, ಅಕ್ಕ, ಅತ್ತೆಯಾಗಿದ್ದೇನೆ. ಇವತ್ತು ನನ್ನ ನೋಡಿ, ಸಾವಿರಾರು ಮಹಿಳೆಯರು ರಾಜಕೀಯಕ್ಕೆ ಬರಬೇಕು ಎಂದು ಇದ್ದಾರೆ. ಸದನದಲ್ಲಿ ಈ ರೀತಿ ಮಾತನಾಡಿದರೆ ಬಹಳ ಹರ್ಟ್​ ಆಗುತ್ತದೆ

ಬೆಳಗಾವಿ: ಸಿಟಿ ರವಿ ಬಂಧನ ಬೆನ್ನಲ್ಲೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ನಾನು ಒಬ್ಬಳು ತಾಯಿ. ಹೆಣ್ಣುಮಗಳು. ಸಿಟಿ ರವಿ ಹೇಳಿಕೆಯಿಂದ ನನಗೆ ಅವಮಾನವಾಗಿದೆ, ನಾನು ದುಃಖಿತಳಾಗಿದ್ದೇನೆ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿದ್ದಾರೆ ಎಂದು ನಾವು ನಿನ್ನೆ ಧರಣಿ ಮಾಡುವಾಗ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿಯವರಿಗೆ ಡ್ರಗ್ ಅಡಿಕ್ಟ್​.. ಡ್ರಗ್ ಅಡಿಕ್ಟ್​ ಎಂದು ಸಿ.ಟಿ ರವಿ ಹೇಳುತ್ತಿದ್ದರು. ಡ್ರಗ್ ಅಡಿಕ್ಟ್ ಯಾಕೆ ಅಂತೀರಾ,
ತಾವು ಸಹ ಅಪಘಾತ ಮಾಡಿದ್ದಿರಿ ತಾವೂ ಸಹ ಕೊಲೆಗಾರಾಗ್ತಿರಿ ಆಗ್ತೀರಾ ಅಂದೆ. ಅಷ್ಟಕ್ಕೆ ರವಿ ನನ್ನ ತೇಜೋವಧೆ ಮಾಡಿದರು . ಆ ಕೆಟ್ಟ ಪದವನ್ನ ನನ್ನ ಬಾಯಿಂದ ಹೇಳೋಕೆ ಕಷ್ಟವಾಗುತ್ತಿದೆ ಎಂದು ಕಣ್ಣೀರು ಹಾಕಿದರು.ನಾಗರೀಕ ಸಮಾಜದಲ್ಲಿ, ರಾಜಕೀಯದಲ್ಲಿ ಬಹಳಷ್ಟು ಧೈರ್ಯ ಮಾಡಿ ಇಲ್ಲಿವರೆಗೆ ಬಂದಿದ್ದೇನೆ ಎಂದು ಕಣ್ಣೀರು ಹಾಕಿದ್ದಾರೆ. ಎಲ್ಲ ಮಹಿಳೆಯರನ್ನು ಪ್ರತಿನಿಧಿಸುತ್ತಿದ್ದೇನೆ. ಆದರೆ ಸಿ.ಟಿ ರವಿ ಆ ಮಾತನ್ನು ಹತ್ತು ಬಾರಿ ಹೇಳಿ ತೇಜೋವಧೆ ಮಾಡಿದರು. ಇದಕ್ಕೆಲ್ಲಾ ಹೆದರುವುದಿಲ್ಲ. ಒಬ್ಬ ತಾಯಿ, ಅಕ್ಕ, ಅತ್ತೆಯಾಗಿದ್ದೇನೆ. ಇವತ್ತು ನನ್ನ ನೋಡಿ, ಸಾವಿರಾರು ಮಹಿಳೆಯರು ರಾಜಕೀಯಕ್ಕೆ ಬರಬೇಕು ಎಂದು ಇದ್ದಾರೆ. ಸದನದಲ್ಲಿ ಈ ರೀತಿ ಮಾತನಾಡಿದರೆ ಬಹಳ ಹರ್ಟ್​ ಆಗುತ್ತದೆ, ನನಗೆ ಶಾಕ್ ಆಗಿದೆ. ದುಃಖದಲ್ಲಿ ಇದ್ದೇನೆ. ನನ್ನ ಮಗ, ಸೊಸೆ ಕಾಲ್ ಮಾಡಿ ಕ್ಷೇತ್ರದ ಜನರು ನಿಮ್ಮ ಜೊತೆ ಇದ್ದಾರೆ ಅಂತ ಧೈರ್ಯ ತುಂಬಿದ್ದಾರೆ ಎಂದರು,

Tags :