ಸ್ವಾಮಿತ್ವ ಯೋಜನೆ: ಸಮಗ್ರ ಆಸ್ತಿ ಮೌಲ್ಯೀಕರಣ
10 ರಾಜ್ಯಗಳ 50 ಸಾವಿರ ಹಳ್ಳಿಗಳ 58 ಲಕ್ಷ ಜನರಿಗೆ ಸ್ವಾಮಿತ್ವ ಆಸ್ತಿ ಕಾರ್ಡ್ ವಿತರಣೆ
ಬೆಂಗಳೂರು: ಸ್ವಾಮಿತ್ವ (SVAMITVA) ಯೋಜನೆ- ಗ್ರಾಮೀಣ ಭಾರತಕ್ಕೆ ಸಮಗ್ರ ಆಸ್ತಿ ಮೌಲ್ಯೀಕರಣ ಪರಿಹಾರವನ್ನು ನೀಡುವ ಗುರಿಹೊಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ದೇಶದಾದ್ಯಂತ ಲಕ್ಷಾಂತರ ಗ್ರಾಮೀಣ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಮಗ್ರ ಆಸ್ತಿ ಮೌಲ್ಯೀಕರಣ ಪರಿಹಾರವನ್ನು ಒದಗಿಸುವುದು ಈ ಯೋಜನೆಯ ಗುರಿಯಾಗಿದೆ. ಸ್ವಾಮಿತ್ವ ಆಸ್ತಿ ಕಾರ್ಡ್‌ಗಳನ್ನು ಭೂಮಾಲೀಕರಿಗೆ ನೀಡಲಾಗುವುದು ಇದರಿಂದ ಆಸ್ತಿ ಮಾಲೀಕತ್ವದ ಮೌಲ್ಯೀಕರಣವನ್ನು ಸುಲಭಗೊಳ್ಳುತ್ತದೆ ಎಂದಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಒಡಿಶಾ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಜನರಿಗೆ ಈ ಕಾರ್ಡ್ ಅನ್ನು ನೀಡಲಿದ್ದಾರೆ. ಈ ಕಾರ್ಡ್‌ನಲ್ಲಿ ಜನರ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗುತ್ತದೆ.