ಹಿಂದೂ ಸಮಾಜ, ಸಂಘಟನೆ ಎಂದರೆ ರೈಗಳಿಗೆ ಯಾಕೆ ಅಲರ್ಜಿ?
07:16 PM Dec 10, 2024 IST | Samyukta Karnataka
ಮಂಗಳೂರು: ಹಿಂದೂಗಳಿಗೆ ಮಾತ್ರ ಸದಾ ಬುದ್ದಿ ಹೇಳಲು ಬರುವ ಕಾಂಗ್ರೆಸ್ ಮಾಜಿ ಸಚಿವ ರಮಾನಾಥ ರೈಗಳದ್ದು ಮುಸ್ಲಿಂ ಸಮುದಾಯದ ಮೇಲೆ ಕುರುಡು ಪ್ರೇಮ, ಹಿಂದೂ ಸಮಾಜ, ಸಂಘಟನೆ ಎಂದರೆ ಅಲರ್ಜಿ ಎಂದು ಡಾ. ಭರತ್ ಶೆಟ್ಟಿ ಕಿಡಿಕಾರಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಹಿಂಸಾಚಾರದ ವಿರುದ್ಧ ಹಿಂದೂ ಸೇವಾ ಸಮಿತಿ ಮಂಗಳೂರಿನಲ್ಲಿ ಮಾಡಿದ ಪ್ರತಿಭಟನೆಯನ್ನು ಟೀಕಿಸಿರುವ ರೈಗಳು ಪ್ಯಾಲೆಸ್ಟೈನ್ ಪರ ಹೋರಾಟವಾದಾಗ ಇಂತಹ ಬುದ್ಧಿ ಮಾತು ತಪ್ಪಿಯೂ ಹೇಳಿಲ್ಲ.
ವಕ್ಫ್ ಬೋರ್ಡ್ ಸಮಸ್ಯೆ ಗಂಭೀರವಾಗಿದ್ದರೂ ಹಿಂದೂ ಸಮಾಜದ ಪರವಾಗಿ ಮಾತನಾಡಿಲ್ಲ, ಇದಕ್ಕೆ ಕಾರಣ ಕರ್ತರಾದ ಸಚಿವ ಜಮೀರ್ ಅಹ್ಮದ್ ಅವರಿಗೂ ಬುದ್ದಿವಾದ ಹೇಳಿಲ್ಲ.
ಕೇವಲ ಹಿಂದೂ ಸಮಾಜ ಮಾತ್ರ ಸಹನೆಯಿಂದ ಇರುವವರು ಎಂಬುದನ್ನು ತಿಳಿದು ಉಚಿತವಾಗಿ ಸಲಹೆ, ಬುದ್ದಿವಾದದ ಮಾತು ಹೇಳುದನ್ನು ಇನ್ನಾದರೂ ರಮಾನಾಥ ರೈಗಳು ನಿಲ್ಲಿಸಿ, ಇತರ ಸಮಾಜವನ್ನೂ ತಿದ್ದುವ ಕೆಲಸ ಮಾಡಲಿ ಎಂದು ತಿರುಗೇಟು ಕೊಟ್ಟಿದ್ದಾರೆ.