ಹಿರಿಯ ನೃತ್ಯಗುರು ಕಮಲಾ ಭಟ್ ವಿಧಿವಶ
ಮಂಗಳೂರು: ಖ್ಯಾತ ನೃತ್ಯ ಗುರು ಕರ್ನಾಟಕ ಕಲಾಶ್ರೀ ಪುರಸ್ಕೃತ ವಿಧುಷಿ ಕಮಲಾ ಭಟ್(೭೦) ಅವರು ಮಂಗಳವಾರ ರಾತ್ರಿ ವಿಧಿವಶರಾಗಿದ್ದಾರೆ.
ನಾಟ್ಯಾಲಯ ಉರ್ವ ಸಂಸ್ಥೆಯ ನಿರ್ದೇಶಕರಾಗಿದ್ದ ಕಮಲಾ ಭಟ್ ಅವರು ಸುಮಾರು ೪೫ ವರ್ಷಗಳಿಂದ ನೃತ್ಯ ಸೇವೆಯಲ್ಲಿ ತೊಡಗಿದ್ದರು.
ಕರ್ನಾಟಕ ಕಲಾಶ್ರೀ, ಪೇಜಾವರ ಶ್ರೀ ವಿಶ್ವೇಶ್ವರ ಶ್ರೀಪಾದರಿಂದ ಶ್ರೀ ರಾಮ ವಿಠಲ ಪುರಸ್ಕಾರ, ಶೃಂಗೇರಿ ಸಂಸ್ಥಾನದಿಂದ ಸನ್ಮಾನ, ಕಲ್ಕೂರ ಪ್ರತಿಷ್ಠಾನದಿಂದ ರಾಜ್ಯೋತ್ಸವ ಗೌರವ ಪುರಸ್ಕಾರ, ಬಿಲ್ಲವ ಸಂಘ ಅಶೋಕನಗರ ಸಂಘಟನೆಯಿಂದ ಪುರಸ್ಕಾರ, ನಾಟ್ಯಕಲಾನಿಧಿ, ನಾಟ್ಯಕಲಾ ಸಂಪನ್ನೇ, ನಾಟ್ಯ ವಿಶಾರದೆ, ರೋಟರಿ ಲಯನ್ ಸಂಸ್ಥೆಗಳಿಂದ ಪುರಸ್ಕಾರಗಳು, ಸಾರ್ವಜನಿಕವಾಗಿ ಜೀವಮಾನ ಸಾಧನೆಗಾಗಿ ’ಸಾರ್ಥಕ’ ಗೌರವ ಸನ್ಮಾನ. ಮೊದಲಾದ ಗೌರವ ಪುರಸ್ಕಾರಗಳಿಂದ ಗೌರವಿಸಲ್ಪಟ್ಟಿದ್ದರು. ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ, ನೃತ್ಯ ಸುಧಾ ಮೇರಿಹಿಲ್, ಚಿಗುರು ನೃತ್ಯ ಸಂಸ್ಥೆ ಬೆಂಗಳೂರು ಸಂಸ್ಥೆಗಳ ಮಾರ್ಗದರ್ಶಕರಾಗಿದ್ದರು.
ನಾಟ್ಯಕಲೆಯ ಪಾವಿತ್ರ್ಯತೆಯನ್ನು ಕರಗತಗೊಳಿಸುತ್ತಾ ನಾವಿನ್ಯತೆಗಳನ್ನು ಸೃಷ್ಟಿಸಿದ ನೃತ್ಯ ಕ್ಷೇತ್ರದ ಅಜಾತ ಶತ್ರು ನೃತ್ಯ ಗುರುವಾಗಿದ್ದ ಕಮಲ ಭಟ್ ಆಗಲಿಕಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಗ ಸೇರಿದಂತೆ ಅಪಾರ ಶಿಷ್ಯವರ್ಗವನ್ನು ಅವರು ಆಗಲಿದ್ದಾರೆ.