For the best experience, open
https://m.samyuktakarnataka.in
on your mobile browser.

ಹೆಚ್ಚು ತೆರಿಗೆದಾತ ಸೆಲೆಬ್ರಿಟಿಗಳು

12:55 AM Sep 06, 2024 IST | Samyukta Karnataka
ಹೆಚ್ಚು ತೆರಿಗೆದಾತ ಸೆಲೆಬ್ರಿಟಿಗಳು

ನವದೆಹಲಿ: ಸೆಲೆಬ್ರಿಟಿಗಳ ಪೈಕಿ ಅತಿ ಹೆಚ್ಚು ತೆರಿಗೆ ಕಟ್ಟುತ್ತಿರುವುದು ನಟ ಶಾರೂಕ್ ಖಾನ್. ೨೦೨೩-೨೪ನೇ ಸಾಲಿ ನಲ್ಲಿ ಶಾರೂಕ್ ಖಾನ್ ೯೨ ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ. ಎರಡನೇ ಸ್ಥಾನದಲ್ಲಿ ದಳಪತಿ ವಿಜಯ್ ಇದ್ದು, ಅವರಿಂದ ೮೦ ಕೋಟಿ ರೂ. ಪಾವತಿಯಾಗಿದೆ. ಸಲ್ಮಾನ್ ಖಾನ್ ೭೫ ಕೋಟಿ ರೂಪಾಯಿ, ಅಮಿತಾಭ್ ಬಚ್ಚನ್ ೭೧ ಕೋಟಿ ಮತ್ತು ವಿರಾಟ್ ಕೊಹ್ಲಿ ೬೬ ಕೋಟಿ ತೆರಿಗೆ ಕಟ್ಟಿ ನಂತರದ ಸ್ಥಾನಗಳಲ್ಲಿದ್ದಾರೆ. ಫಾರ್ಚೂನ್ ಪತ್ರಿಕೆ ಯಲ್ಲಿ ಈ ಕುರಿತು ವರದಿ ಪ್ರಕಟವಾಗಿದೆ.
ಶಾರೂಕ್ ಖಾನ್ ಅಭಿನಯದ ಕಳೆದ ವರ್ಷ ಬಿಡುಗಡೆಯಾಗಿದ್ದ ಮೂರು ಸಿನಿಮಾಗಳು ಹಿಟ್ ಎನ್ನಿಸಿಕೊಂಡು ಅಪಾರ ಲಾಭ ಹರಿದು ಬಂದಿತ್ತು. ಅದರಿಂದಾಗಿ ಹೆಚ್ಚು ತೆರಿಗೆಯನ್ನೂ ಪಾವತಿ ಮಾಡಿದ್ದಾರೆ. ತಮಿಳಿನ ದಳಪತಿ ವಿಜಯ್ ಅಭಿನಯಿಸಿರುವ ಸತತವಾಗಿ ೭ ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ದೋಚಿದೆ. ಭಾರತದಲ್ಲಿ ಮೊದಲ ಬಾರಿ ನಟನೊಬ್ಬ ಚಿತ್ರವೊಂದಕ್ಕೆ ೨೦೦ ಕೋಟಿ ಪಡೆದಿರುವ ಹೆಗ್ಗ ಳಿಕೆಯೂ ಅವರ ಮೇಲಿದೆ. ಅದು ಇಲ್ಲಿ ಪ್ರತಿಫಲನಗೊಂಡಿದೆ.
ಇನ್ನು ಕ್ರಿಕೆಟಿಗರ ಪೈಕಿ ಎಂ.ಎಸ್.ಧೋನಿ ೩೮ ಕೋಟಿ ರೂಪಾಯಿ ತೆರಿಗೆ ಪಾವತಿಸಿ ಮೊದಲ ಸ್ಥಾನ ಪಡೆದು ಕೊಂಡಿದ್ದರೆ, ಸಚಿನ್ ತೆಂಡೂಲ್ಕರ್ ೨೮ ಕೋಟಿ ರೂಪಾಯಿ, ಸೌರವ್ ಗಂಗೂಲಿ ೨೩ ಕೋಟಿ ರೂಪಾಯಿ ಕಟ್ಟಿ ನಂತರದ ಸ್ಥಾನ ಪಡೆದುಕೊಂಡಿದ್ದಾರೆ.