For the best experience, open
https://m.samyuktakarnataka.in
on your mobile browser.

ಹೊಂಡಗಳ ವಿಡಿಯೋ ವೈರಲ್‌: ಹೊಂಡ ಮುಚ್ಚಲು ಕಾರ್ಯಪ್ರವೃತ್ತ

07:09 PM Dec 14, 2024 IST | Samyukta Karnataka
ಹೊಂಡಗಳ ವಿಡಿಯೋ ವೈರಲ್‌  ಹೊಂಡ ಮುಚ್ಚಲು ಕಾರ್ಯಪ್ರವೃತ್ತ

ಮಂಗಳೂರು: ಹೊರವಲಯದ ಜಪ್ಪಿನಮೊಗರು ನೇತ್ರಾವತಿ ಸೇತುವೆಯಲ್ಲಿ ವಾಹನಗಳ ಚಕ್ರವೇ ಸಿಡಿದು ಹೋಗುವಷ್ಟು ಗಾತ್ರದ ಹೊಂಡಗಳಾಗಿದೆ. ಈ ಬಗ್ಗೆ ಸಾರ್ವಜನಿಕರೊಬ್ಬರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಶನಿವಾರ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ.

ಶುಕ್ರವಾರ ರಾತ್ರಿ ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರೊಂದರ ಚಕ್ರ ಸೇತುವೆ ಮೇಲಿದ್ದ ಹೊಂಡಕ್ಕೆ ಬಿದ್ದು ಚಕ್ರವೇ ಸಿಡಿದು ಹೋಗಿತ್ತು. ಇದರ ವಿಡಿಯೋವನ್ನು ಸಾರ್ವಜನಿಕರೊಬ್ಬರು ವೈರಲ್‌ ಮಾಡಿದ್ದರು. ಈ ವಿಡಿಯೋ ಹೆದ್ದಾರಿ ಇಲಾಖೆಗೂ ತಲುಪಿದ್ದು, ತಕ್ಷಣ ಅಧಿಕಾರಿಗಳು ಹೊಂಡ ಮುಚ್ಚಲು ಕಾರ್ಯಪ್ರವೃತ್ತರಾಗಿದ್ದಾರೆ.

Tags :