ಹ್ಯಾಪಿ ಫ್ರೆಂಡ್ ಶಿಪ್ ಡೇ….
ವಿಶ್ ಯು ಹ್ಯಾಪಿ ಫ್ರೆಂಡ್ ಶಿಪ್ ಡೇ ಎಂದು ಸುಮಾರಣ್ಣ.. ಸಿಟ್ಯೂರಪ್ಪಗೆ ಕಳಿಸಿದ್ದರು. ಅದನ್ನು ನೋಡಿದ ಸಿಟ್ಯೂರಪ್ಪ ಎಡವಟ್ಟು ಮಾಡಿಕೊಂಡರು. ಮದ್ರಾಮಣ್ಣ ಮೆಸೇಜ್ ಕಳಿಸಿದಾರೆ…ನಾನೂ ಅವರಿಗೆ ವಾಪಸ್ ಕಳಿಸುತ್ತೇನೆ ಎಂದು ..ವಿಶ್ಯೂದ ಸೇಮ್…ಹ್ಯಾಪಿ ಫ್ರೆಂಡ್ ಶಿಪ್….ಅನೇಕ ಮನ್ವಂತರ- ನಮ್ಮ ಗೆಳೆತನ ನಿರಂತರ ಎಂದು ಕಳಿಸಿದರು. ವಾಟ್ಸ್ ಪ್ ಮೆಸೇಜ್ ಬಾಕ್ಸ್ ಓಪನ್ ಮಾಡಿದ ಮದ್ರಾಮಣ್ಣೋರು ಗಾಬರಿಯಾಗಿ…ಅಲಾ ನಂಗೆ ಮೆಸೇಜ್ ಕಳಿಸಿದಾನಲ್ಲ? ನಾನು ಕಳಿಸುತ್ತೇನೆ…ನೋಡು ಸಿಟ್ಯೂರಪ್ಪ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾದ ಯಾತ್ರೆ ಮಾಡೋ ಹಕ್ಕು ಎಲ್ರಿಗೂ ಇತ್ತದೆ…ಆದರೆ ಗೆಳೆಯ ಎಂದು ಮೆಸೇಜ್ ಮಾಡಿದ್ದಕ್ಕೆ ಧನ್ಯವಾದ ಎಂದು ಸಂದೇಶ ರವಾನಿಸಿದರು. ಮತ್ತೆ ಸಿಟ್ಯೂರಪ್ಪ.. ಮದ್ರಾಮಣ್ಣ ನಂಗ್ಯಾಕೆ ಕಳಿಸಿದ್ದಾರೆ? ಎಂದು ಅಂದುಕೊಂಡರು. ಈ ಕಡೆ ತೆನೆ ಮತ್ತು ಕಮಲ ಮನೆ ಬಾಲಕರು ಮಸೇಜ್ ಮಾಡಿಕೊಂಡರು. ನಾನು ಸಾಮ್ರಾಟ್ ಕಣಣ್ಣ. ಆಪಿ ಫ್ರೆಂಡ್ ಸಿಪ್ ಅಂತ ಬಂಡೆ ಸಿವೂಗೆ ಮೆಸೇಜ್ ಹಾಕಿದಾಗ….ಅವರು ಅದನ್ನ ನೋಡಿ ಎಂಗ್ ನಡೀತಾ ಇದೆ…ನಡಸ್ರಿ…ನಡಸ್ರಿ ಅಂತ ವಾಪಸ್ ಮೆಸೇಜ್ ಹಾಕಿದರು. ಸಿಟ್ಯೂರಪ್ಪರ ಕಂದ ಗಜೆಯೇಂದ್ರ…ಹ್ಯಾಪಿ ಫ್ರೆಂಡ್ ಶಿಪ್ ಡಾಕ್ಟ್ರೇ ಎಂದು ಮದ್ರಾಮಣ್ಣನವರ ಕಂದಮ್ಮಗೆ ಮೆಸೇಜ್ ಹಾಕಿದ…ಅದಕ್ಕೆ ಅವರು ಆರೋಗ್ಯ ನೋಡಿಕೊಳ್ಳಿ ಎಂದು ವಾಪಸ್ ಹಾಕಿದರು. ಸುಮಾರಣ್ಣೋರ ಪುತ್ರ..ನಿಕಾಲಿಲಾ …ಇಬ್ರೂ ಗೆಳೆಯರಿಗೆ ಹ್ಯಾಪಿ ಗೆಳೆತನ ಅಂತ ಹಾಕಿದರು. ಹೀಗೆ ಅವರಿಗೆ ಇವರು…ಇವರಿಗೆ ಅವರು ಮೆಸೇಜುಗಳನ್ನು ಮಾಡಿಕೊಂಡರು.
ಈ ಸುದ್ದಿ ಗೊತ್ತಾಗಿ ಗುತ್ನಾಳ್ ಬಸ್ಸಣ್ಣ ಅವರು….
ಮುಂದಿನ ದಿನಗಳಲ್ಲಿ ಮೂವರು ಕೂಡಿ ಗೆಳೆತನ ಮಾಡಿಕೊಂಡು ಸರ್ಕಾರ ನಡಸಂಗ ಕಾಣತೈತಿ…ಪಾದಯಾತ್ರೆ…ಸಮಾವೇಶ ಎಲ್ಲ ಸುಳ್ಳಾರೀ. ಮೂರೂ ಕಡೆ ಅಪ್ಪಾಜಿ..ಮಗ…ಅಪ್ಪಾಜಿ ಮಗ…ಅಪ್ಪಾಜಿ ಮಗ..
ಇದಕ್ಕೆಲ್ಲ ನಾ ಬಿಡಂಗಿಲ್ಲ..ನಾ ಬಿಡಂಗಿಲ್ಲ…ನಾ ಬಿಡಂಗಿಲ್ಲ ಎಂದು ವರದಿಗಾರ್ತಿ ಕಿವುಡನುಮಿ ಹಿಡಿದ ಮೈಕ್‌ನಲ್ಲಿ ಒದರುತ್ತಿದ್ದರು.