For the best experience, open
https://m.samyuktakarnataka.in
on your mobile browser.

ʻಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ʼ ಸೇರಿದ ಪುಟ್ಟ ಪೋರನ ಸಾಧನೆ

09:12 PM May 12, 2024 IST | Samyukta Karnataka
ʻಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ʼ ಸೇರಿದ ಪುಟ್ಟ ಪೋರನ ಸಾಧನೆ

ಹುಬ್ಬಳ್ಳಿ: ಕೇವಲ ಮೂರುವರೆ ವರ್ಷದ ಈ ಪುಟ್ಟ ಪೋರ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಾಧಕ ಎಂದು ಹೆಸರುಗಳಿಸಿ ಎಲ್ಲರ ಹುಬ್ಬೇರೆಸುವಂತೆ ಮಾಡಿದ್ದಾನೆ.
ಮೂಲತಃ ದಾಂಡೇಲಿಯವರು ಹಾಗೂ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಈಗ ನೆಲೆಸಿರುವ ರೋಹಿತ್ ಸ್ವಾಮಿ, ಮರ್ಲಿನ್ ದಂಪತಿ ಮಗನಾದ `ಅನೋಶ್' ಮಾಡಿರುವ ಸಾಧನೆ ಎಂದರೆ, ಪ್ರಧಾನ ಮಂತ್ರಿ ಹೆಸರು, ಪ್ರಾಸಗಳು, ಪ್ರಾರ್ಥನೆ, ವಾರಗಳು, ರಾಷ್ಟ್ರೀಯ ಚಿಹ್ನೆಗಳು, ಇಂದ್ರಿಯ ಅಂಗಗಳು, ಸಂಚಾರಿ ಸೂಚನೆಗಳು, ಹಣ್ಣುಗಳ ಹೆಸರು, ವಿರುದ್ಧಾರ್ಥಕ ಪದ, ಬೆರೆಳೆಣಿಕೆ, ೧೪ ಪ್ರಾಣಿಗಳ ೧೦ ಪಕ್ಷಿಗಳ ಹೆಸರು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ನಮೂದಿಸಿದ್ದಾನೆ.
೮ ವೃತ್ತಿಪರಗಳನ್ನು ಗುರುತಿಸುವ ಅನೋಶ್ ಹಲವು ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದಾನೆ. ಅಪ್ಪ, ಅಮ್ಮ ಇಬ್ಬರೂ ಖಾಸಗಿ ಸಂಸ್ಥೆ ನೌಕರರಾಗಿದ್ದು, ಪ್ಲೇಹೋಂ ಹೋಗಿ ನಂತರ ತಂದೆ-ತಾಯಿಯೊಂದಿಗೆ ಕಾಲ ಕಳೆಯುತ್ತ ಜ್ಞಾನ ಪಡೆದುಕೊಂಡಿದ್ದಾನೆ.
ಬಹಳ ಚುರುಕಾಗಿರುವ ಅನೋಶ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಎಂದರೆ ಏನು ಅಂತ ತಿಳಿಯದ ವಯಸ್ಸಿನಲ್ಲಿಯೇ ಈ ಸಾಧನೆ ಮಾಡಿದ್ದಾನೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಈ ಅದ್ಭುತ ಸಾಧನೆ ಮಾಡಿದ ಮಗುವಿನ ಅಪ್ಪ-ಅಮ್ಮ ಮತ್ತು ಕುಟುಂಬದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.