For the best experience, open
https://m.samyuktakarnataka.in
on your mobile browser.

ಅಂಗಲಾಚಿದರೂ ಬಿಡಲಿಲ್ಲ ಡಿ ಗ್ಯಾಂಗ್

11:00 PM Sep 05, 2024 IST | Samyukta Karnataka
ಅಂಗಲಾಚಿದರೂ ಬಿಡಲಿಲ್ಲ ಡಿ ಗ್ಯಾಂಗ್

ಬೆಂಗಳೂರು: ಸಿಕ್ಕಾಪಟ್ಟೆ ಹೊಡೆತ ತಿಂದು ಎರಡು ಲಾ ರಿಗಳ ಮಧ್ಯೆ ಕುಕ್ಕರಗಾಲಿನಲ್ಲಿ ಕುಳಿತುಕೊಂಡು ನನ್ನದು ತಪ್ಪಾಗಿದೆ.. ನನ್ನ ಬಿಟ್ಟುಬಿಡಿ ಎಂದು ಚಿತ್ರದುರ್ಗದ ರೇಣುಕಾ ಸ್ವಾಮಿ ಪರಿಪರಿಯಿಂದ ಅಂಗಲಾಚಿದರೂ ಯಾರೊಬ್ಬರೂ ಕೇಳಲಿಲ್ಲ. ಮತ್ತೆ ನಿರ್ದಯವಾಗಿ ಥಳಿಸಿ ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಪೊಲೀಸರಿಗೆ ಸಾಕ್ಷ್ಯ ದೊರೆತಿದೆ.
ಪ್ರಕರಣ ಕುರಿತು ಪೊಲೀಸರು ೩೯೯೧ ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ನಂತರ ಅನೇಕ ಮಾಹಿತಿಗಳು ಹೊರಬೀಳುತ್ತಿವೆ. ಚಿತ್ರದುರ್ಗದ ರೇಣುಕಸ್ವಾಮಿಯನ್ನು ಅತ್ಯಂತ ಕ್ರೂರವಾಗಿ ನಟ ದರ್ಶನ್ ಮತ್ತು ಆತನ ತಂಡ ಚಿತ್ರಹಿಂಸೆ ನೀಡಿ ಕೊಂದಿರುವ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್‌ನಲ್ಲಿ ಉಲ್ಲೇಖಿ ಸಲಾಗಿದೆ. ದರ್ಶನ್ ತಳ್ಳಿದ್ದ ರಿಂದ ಭಾರಿ ವಾಹನಕ್ಕೆ ರೇಣುಕಸ್ವಾಮಿ ತಲೆ ಬಡಿದು ಪ್ರಜ್ಞೆ ತಪ್ಪಿಬಿದ್ದಿದ್ದ.
ಅಷ್ಟಾದ ನಂತರವೂ ಆತನಿಗೆ ದೊಣ್ಣೆ, ರಿಪೀಸ್ ಪಟ್ಟಿ ಯಿಂದ ಹಲ್ಲೆ ನಡೆಸಿ ಹಗ್ಗದಲ್ಲಿ ಕಟ್ಟಿ ಹಾಕಿದ್ದರು. ಬಳಿಕ ಕಾಲು ಹಿಡಿದು ಕಾಂಪೌಂಡ್‌ಗೆ ಬಡಿದಿದ್ದರು. ಇಷ್ಟೆಲ್ಲ ಹಿಂಸೆ ತಾಳಲಾರದೆ ರೇಣುಕಸ್ವಾಮಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಎರಡು ಲಾರಿಗಳ ಮಧ್ಯೆ ಬಿಳಿ ಬನಿಯನ್ ಮತ್ತು ನೀಲಿ ಜೀನ್ಸ್ ತೊಟ್ಟ ರೇಣುಕಾಸ್ವಾಮಿ ಕುಕ್ಕರ ಕಾಲಿನಲ್ಲಿ ಕುಳಿತು ಪ್ರಾಣ ಬಿಕ್ಷೆ ನೀಡುವಂತೆ ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ಪೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ನನ್ನ ಮಗನನ್ನು ಯಾವುದೆ ಕಾರಣಕ್ಕೂ ಜೀವ ಸಹಿತ ಉಳಿಸಬೇಡಿ ಎಂದು ಪವಿತ್ರಾಗೌಡ ಉಳಿದ ಆರೋಪಿಗಳನ್ನು ಪ್ರೋತ್ಸಾಹಿಸುತ್ತಿರುವುದನ್ನು ಆರೋಪಿಯೊಬ್ಬ ಸೆರೆ ಹಿಡಿದಿರುವುದರಿಂದ ದರ್ಶನ್ ಅಂಡ್ ಗ್ಯಾಂಗ್ನ ಪ್ರತಿಯೊಂದು ಕೃತ್ಯವೂ ರೆಕಾರ್ಡ್ ಅಗಿ ಹೋಗಿದೆ.
ಅಷ್ಟೆ ಆಗಿದ್ದರೆ ಪರ್ವಾಗಿಲ್ಲ.. ದರ್ಶನ್ ಅಂಡ್ ಟೀಮ್ನ ಪ್ರತಿಯೊಂದು ಕೃತ್ಯವನ್ನು ತನ್ನ ಫೋನಿನಲ್ಲಿ ಸೆರೆ ಹಿಡಿದ ಆರೋಪಿ ಅಷ್ಟು ದೃಶ್ಯಗಳನ್ನು ತನ್ನ ಮತ್ತೊಬ್ಬ ಸ್ನೇಹಿತನಿಗೆ ಕಳುಹಿಸಿರುವುದರಿಂದ ಎಲ್ಲಾ ಸಾಕ್ಷ್ಯಗಳು ಪೊಲೀಸರ ಕೈ ಸೇರಿವೆ. ಹೀಗಾಗಿಯೇ ಒಂದು ಜೀವ ತೆಗೆಯಲು ಪ್ರೋತ್ಸಾಹಿಸಿದ ಪವಿತ್ರಾಗೌಡ ಅವರನ್ನು ಎ-ಒನ್ ಆರೋಪಿಯನ್ನಾಗಿ ಮಾಡಲಾಗಿದೆ.
ದರ್ಶನ್, ಪವಿತ್ರ ಮೊಬೈಲ್ ರಿಟ್ರೀವ್ ಆಗುತ್ತಿಲ್ಲ: ಬೆಂಗ ಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾ ಸ್ವಾಮಿ ಅಂಗಲಾಚು ತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ದವರ ಕರುಳು ಚುರಕ್ ಎಂದಿದೆ. ಈ ಫೋಟೋಗಳು ಪ್ರದೋಷ್ ಮೊಬೈಲ್‌ನಿಂದ ರಿಟ್ರೀವ್ ಮಾಡಲಾಗಿದೆ. ಆದರೆ, ದರ್ಶನ್ ಮೊಬೈಲ್‌ಗಳನ್ನು ರಿಟ್ರೀವ್ ಮಾಡುವುದಕ್ಕೆ ಹೈದರಾಬಾದಿನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಆದರೆ ಅಲ್ಲಿ ರಿಟ್ರೀವ್ ಮಾಡೋಕೆ ಆಗಲಿಲ್ಲ. ಇದೀಗ ಅವರ ಮೊಬೈಲ್‌ಗಳನ್ನು ಗುಜರಾತ್‌ನ ಎಫ್‌ಎಸ್‌ಎಲ್ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ರಿಟ್ರೀವ್ ಮಾಡಿಸುವ ಕುರಿತು ಪೊಲೀಸರು ಚಿಂತನೆ ನಡೆಸಿದ್ದಾರೆ.

ಮೊಬೈಲ್‌ನಲ್ಲಿ ದೃಶ್ಯ
ಪ್ರಾಣ ಕಳೆದುಕೊಂಡಿದ್ದ ರೇಣುಕಾಸ್ವಾಮಿಯ ದೇಹದ ಮೇಲೆ ೩೯ ಗಾಯದ ಗುರುತುಗಳು ಪತ್ತೆಯಾಗಿರುವುದು ಅವರ ರಾಕ್ಷಸಿ ಕೃತ್ಯಕ್ಕೆ ಸಾಕ್ಷಿಯಾಗಿದೆ.೧೨ ಆರೋಪಿಗಳ ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆದು ಎಫ್‌ಎಸ್‌ಎಲ್ ಕಳುಹಿಸಿದಾಗ ಆರೋಪಿಗಳಲ್ಲೇ ಒಬ್ಬ ತನ್ನ ಫೋನಿನಲ್ಲಿ ಸೆರೆ ಹಿಡಿದಿದ್ದ ಎಲ್ಲಾ ದೃಶ್ಯಗಳು ಪೊಲೀಸರಿಗೆ ಸಿಕ್ಕಿವೆ.

ಸಂಚು
ರೇಣುಕಸ್ವಾಮಿಯನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ಶವ ವಿಲೇವಾರಿ ಮತ್ತು ಸಾಕ್ಷಾಧಾರ ನಾಶಪಡಿಸುವ ಜತೆಗೆ ಪೊಲೀಸ್ ತನಿಖೆ ದಿಕ್ಕು ತಪ್ಪಿಸುವುದಕ್ಕೂ ಕ್ರಿಮಿನಲ್ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಬಂಧಿತ ೧೭ ಆರೋಪಿಗಳ ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷಾಧಾರ ಸಹ ಪೂರಕವಾಗಿವೆ ಎಂದು ಉಲ್ಲೇಖಿಸಲಾಗಿದೆ.