ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳಿಂದ ಧಿಡೀರ್ ಪ್ರತಿಭಟನೆ
ಯಾದಗಿರಿ: ಇಂದಿಲ್ಲಿ ಜಿಲ್ಲಾಡಳಿತ ಭವನ ಆವರಣದಲ್ಲಿ ಜರುಗಿದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜೈ ಸಂವಿಧಾನ, ಜೈ ಭೀಮ ಎಂಬ ಘೋಷಣೆಗಳು ವೇದಿಕೆಯಲ್ಲಿ ಮೊಳಗಲಿಲ್ಲ ಮತ್ತು ಪಿಎಸ್ ಐ ಪರಶುರಾಮ್ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಚನ್ನಾರಡ್ಡಿ ಪಾಟೀಲ್ ಭಾಗವಹಿಸಿದ್ದನ್ನು ಖಂಡಿಸಿ ದಲಿತ ಸಂಘಗಳ ಮುಖಂಡರು ದಿಡೀರ್ ಪ್ರತಿಭಟನೆಗಳ ಘಟನೆ ನಡೆಯಿತು.
ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆಯತ್ತ ಬಂದ ಕೆಲ ದಲಿತ ಮುಖಂಡರು ಕಾರ್ಯಕ್ರಮದಲ್ಲಿ ಸಂವಿಧಾನಕೆ ಗೌರವ ಕೊಟ್ಟಿಲ್ಲ ಎಂದು ನಿರೂಪಕರ ಜತೆ ಮಾತಿಗಿಳಿದರು.ಪ್ರೋಟೊ ಕಾಲ್ ಪ್ರಕಾರ ಮಾಡಲಾಗಿದೆ ಎಂದು ಹೇಳಿದರೂ ಸಮಾಧಾನಗೊಳ್ಳದ ಅವರು ಡಿಸಿ ಡಾ.ಸುಶೀಲಾ ಅವರಿಗೆ ಈ ಬಗ್ಗೆ ಪ್ರಶ್ನಿಸಿದರು. ಎಲ್ಲವೂ ಸರಿಯಾಗಿ ಮಾಡಲಾಗಿದೆ ಎಂದರು. ಆದರೂ ಕೆಲ ಹೊತ್ತು ಪ್ರತಿಭಟನೆಗೆ ಮುಂದಾಗಿ ಸಚಿವರ ಕಾರ್ ಬಳಿ ಬಂದು ತಡೆಯಲು ಯತ್ನಿಸಿದಾಗ ಪೊಲೀಸರು ಸಚಿವರಿಗೆ ಹೊಗಲು ಅನುಕೂಲ ಮಾಡಿಕೊಟ್ಟರು. ಗದ್ದಲ ಗಮನಿಸಿದ ಶಾಸಕರು ಜಾಗ ಖಾಲಿ ಮಾಡಿದರು. ನಂತರ ಡಿಸಿ ಅವರಿಗೆ ಭೇಟಿ ಮಾಡಿ ಮುಂದೆ ಶಾಸಕರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ಮಾಡುವುದಾಗಿ ದಲಿತ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದಾಗ ಪರಸ್ಥಿತಿ ತಿಳಿಯಾಯಿತು.