ಅಕ್ರಮ ಮರಳು ಅಡ್ಡೆ ಮೇಲೆ ಗಣಿ ಅಧಿಕಾರಿಗಳ ದಾಳಿ
09:49 PM Nov 07, 2024 IST
|
Samyukta Karnataka
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ನೇತ್ರಾವತಿ ನದಿಯ ಅಜೆಕುರಿ ಎಂಬಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ಖಚಿತ ಮಾಹಿತಿ ಮೇರೆಗೆ ನ. 6ರಂದು ಬೆಳಗ್ಗೆ ಮಂಗಳೂರು ಗಣಿ ಇಲಾಖೆ ತಂಡ ದಾಳಿ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಗಣಿ ಇಲಾಖೆಯ ಗಿರೀಶ್ ಮೋಹನ್ ನೇತೃತ್ವದ ತಂಡ ಬುಧವಾರ ದಾಳಿ ನಡೆಸಿದ ವೇಳೆ ಸ್ಥಳದಲ್ಲಿ ಮರಳುಗಾರಿಕೆ ನಡೆಯುತ್ತಿರುವುದು ಕಂಡುಬಂದಿದ್ದು ಮರಳುಗಾರಿಕೆಗೆ ಬಳಸಲಾಗುತ್ತಿದ್ದ ನಾಲ್ಕು ಬೋಟುಗಳನ್ನು ವಶಕ್ಕೆ ಪಡೆದಿದ್ದು ಇವುಗಳ ಮೌಲ್ಯ 6 ಲಕ್ಷ ರೂ ಅಗಿದ್ದು.ಸ್ಥಳದಲ್ಲಿ ಸಂಗ್ರಹಿಸಿದ್ದ ಮರಳಿನ ಮೌಲ್ಯ 25,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಗಿರೀಶ್ ಮೋಹನ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಧರ್ಮಸ್ಥಳ ಗ್ರಾಮ ಆಡಳಿತಧಾರಿ ಪ್ರದೀಪ್ ಕುಮಾರ್, ಗ್ರಾಮ ಸಹಾಯ ಹರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Next Article