For the best experience, open
https://m.samyuktakarnataka.in
on your mobile browser.

ಅಜ್ಜನ ಕವಿತೆ ಮೊಮ್ಮಗನಿಗೆ ಹಂಪಿ ಮಾದರಿ ಸೃಷ್ಟಿಗೆ ಪ್ರೇರಣೆ

09:38 AM Sep 12, 2024 IST | Samyukta Karnataka
ಅಜ್ಜನ ಕವಿತೆ ಮೊಮ್ಮಗನಿಗೆ ಹಂಪಿ ಮಾದರಿ ಸೃಷ್ಟಿಗೆ ಪ್ರೇರಣೆ

ಹುಬ್ಬಳ್ಳಿ : 'ಹಚ್ಚೇವು ಕನ್ನಡದ ದೀಪ' ಎಂಬ ಪ್ರಸಿದ್ಧ ಗೀತೆಯನ್ನು ರಚಿಸಿದ ನಾಡಿನ ಹೆಮ್ಮೆಯ ಕವಿ ಡಾ. ಡಿ.ಎಸ್ ಕರ್ಕಿ ಅವರ ಭಾವತೀರ್ಥ ಸಂಕಲನದಲ್ಲಿ 'ತುಂಗಭದ್ರೆಯ ಹಾಡು' ಅನ್ನೋ ಕವಿತೆಯಿಂದ ಪ್ರೇರಪಣೆಗೊಂಡು ಅವರ ಮೊಮ್ಮಗನಾದ ಸಂತೋಷ್ ಕರ್ಕಿ ಅವರು ಹುಬ್ಬಳ್ಳಿಯ ಲಿಂಗರಾಜನಗರದಲ್ಲಿರುವ (ಉತ್ತರ ಭಾಗ) ಅವರ ಮನೆಯಲ್ಲಿ ಈ ವರ್ಷ ತುಂಗಭದ್ರೆ ನದಿಯ ದಡದಲ್ಲಿರುವ ಖ್ಯಾತ ಹಂಪಿಯ ನಗರವನ್ನ . ಅದರಲ್ಲಿ ಬರುವ ಪ್ರಮುಖ ಐತಿಹಾಸಿಕ ಸ್ಥಳಗಳನ್ನು ತಮ್ಮ ಕರಕುಶಲದಿಂದ ಮಿನಿಯೇಚರ್ ಆಕೃತಿಗಳನ್ನ ಸೃಷ್ಟಿಸಿ ಹಂಪಿಯ ಸೊಬಗನ್ನು ಗಣಪತಿಗೆ ಒಂದು ಐತಿಹಾಸಿಕ ವೇದಿಕೆಯನ್ನ ಸೃಷ್ಟಿಸಿದ್ದಾರೆ.
ಅಂಜನಾದ್ರಿ ಬೆಟ್ಟ, ವಿಜಯ್ ವಿಠ್ಠಲ ದೇವಸ್ಥಾನ . ಪ್ರಸಿದ್ಧ ಹಂಪಿ ರಥ ., ಲೋಟಸ್ ಮಹಲ್, ವಿರೂಪಾಕ್ಷ ದೇವಾಲಯ , ನರಸಿಂಹ , ಕಡಲೆಕಾಳು ಗಣೇಶ . ಗಣಪತಿ ಮೂರ್ತಿ ಕೆಳಗೆ ಗುಡ್ಡ ಬಂಡೆಗಳ ನಡುವೆ ಹರಿದು ಬರುವ ತುಂಗಭದ್ರೆ ತುಂಬಾ ಸೊಗಸಾಗಿ ಮೂಡಿ ಬಂದಿವೆ.