ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನಾಮಧೇಯ ಪತ್ರವನ್ನ ಬಿಜೆಪಿಯವರೇ ಯಾಕೆ ಬರೆದಿರಬಾರದು ?

01:30 PM Nov 30, 2024 IST | Samyukta Karnataka

ಬಿಜೆಪಿಯವರೇ ಅನಾಮಧೇಯ ಪತ್ರಗಳನ್ನ ಬರೀತಾರೆ, ಅದು ನಮಗೆ ಲೆಕ್ಕ ಇಲ್ಲ.

ಮಂಗಳೂರು: ಹಾಸನದ ಸ್ವಾಭಿಮಾನ ಸಮಾವೇಶಕ್ಕೆ ಯಾರ ಅಸಮಾಧಾನವೂ ಇಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸಮಾವೇಶಕ್ಕೆ ಅಸಮಾಧಾನ ಅನಾಮಧೇಯ ಪತ್ರ ವಿಚಾರವಾಗಿ ಮಾತನಾಡಿದ ಅವರು ಅನಾಮಧೇಯ ಪತ್ರವನ್ನ ಬಿಜೆಪಿಯವರೇ ಯಾಕೆ ಬರೆದಿರಬಾರದು ? ಬಿಜೆಪಿಯವರೇ ಅನಾಮಧೇಯ ಪತ್ರಗಳನ್ನ ಬರೀತಾರೆ, ಅದು ನಮಗೆ ಲೆಕ್ಕ ಇಲ್ಲ. ನಮ್ಮಲ್ಲಿ ಯಾವುದೇ ಅಪಸ್ವರ ಇಲ್ಲ, ನಾನು ತುಮಕೂರಲ್ಲಿ ಸಮಾವೇಶ ಮಾಡಲು ಹೊರಟಿದ್ದೆವು, ಆದರೆ ನಮಗೆ ಬೇರೆ ಕಾರ್ಯಕ್ರಮ ಕೊಟ್ಟಿದ್ದಾರೆ, ಪಕ್ಷದಿಂದಲೇ ಸ್ವಾಭಿಮಾನ ಸಮಾವೇಶ ಮಾಡುತ್ತಿದ್ದೇವೆ ಬೇರೆ ಬೇರೆ ಜನರು ನಮಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ಚಂದ್ರಶೇಖರನಾಥ್ ಸ್ವಾಮೀಜಿ ಮೇಲೆ ಎಫ್ ಐ ಆರ್: ಮುಸ್ಲಿಂ ವೋಟ್ ಬ್ಯಾನ್ ಹೇಳಿಕೆ ನೀಡಿದ ಚಂದ್ರಶೇಖರನಾಥ್ ಸ್ವಾಮೀಜಿ ಕಾನೂನಿನ ಎದುರು ದೊಡ್ಡವರಲ್ಲ, ಕಾನೂನಿನ ಎದುರು ನಾನು ಸೇರಿದಂತೆ ಸ್ವಾಮೀಜಿಯೂ ಒಂದೆ, ಕಾನೂನು ಬೇರೆ ಬೇರೆ ಇದ್ರೆ ಬೇರೆ ಬೇರೆ ಕಾನೂನು ಉಪಯೋಗ ಮಾಡಬಹುದು, ಈ ದೇಶದಲ್ಲಿ ಇರೋ ಕಾನೂನು ಎಲ್ಲರಿಗೂ ಒಂದೆ

ಡ್ರಗ್ಸ್ ವಿರುದ್ಧ ನಮ್ಮ ಸರಕಾರ ಯುದ್ಧ ಸಾರಿದೆ : ಮಂಗಳೂರಿನಲ್ಲಿ ಡ್ರಗ್ಸ್ ವಿರುದ್ಧ ಸಮರ ಸಾರಿದ ಗೃಹ ಸಚಿವ ಪರಮೇಶ್ವರ್ ಅವರು 250ಕ್ಕೂ ಹೆಚ್ಚು ಕೋಟಿ ರೂ ಮೌಲ್ಯದ ಡ್ರಗ್ಸ್ ಹಿಡಿದಿದ್ದೇವೆ, ಡ್ರಗ್ ಪೆಡ್ಲಿಂಗ್ ಮಾಡ್ತಾರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ
ಅನೇಕ ವಿದೇಶಿಯರೂ ಇಲ್ಲಿ ಬಂದು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ, ವಿದೇಶದಿಂದ ವಿದ್ಯಾಭ್ಯಸ್ಕಕ್ಕೆ ಬಂದು ಈ ಕೆಲಸ ಮಾಡಿದವರನ್ನ ಡಿಪೋರ್ಟ್ ಮಾಡಿದ್ದೇವೆ, ಗೂಂಡಾ ಕೇಸ್ ಹಾಕಲು ಕ್ರಮ ಕೈಗೊಂಡಿದ್ದೇವೆ, ಈ ವಿಚಾರದಲ್ಲಿ ಯಾವುದೇ ಕಾಂಪ್ರೊಮೈಸ್ ಇಲ್ಲ
ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ

ನಕ್ಸಲರಿಗೆ ಶರಣಾಗಲು ಕೇಳುತ್ತಿದ್ದೇವೆ: ನಕ್ಸಲ್ ವಿರುದ್ಧದ ಕಾರ್ಯಾಚರಣೆ ತೀವ್ರಗೊಂಡ ಹಿನ್ನೆಲೆಯಲ್ಲಿ ನಕ್ಸಲರ್‌ ಜೊತೆಯಲ್ಲಿ ಇರುವವರಿಗೆ ಶರಣಾಗಲು ಕೇಳುತ್ತಿದ್ದೇವೆ, ನಕ್ಸಲರು ಶರಣಾದರೆ ಪ್ಯಾಕೇಜ್ ನೀಡುತ್ತೇವೆ, ಸಾಮಾನ್ಯ ಜೀವನಕ್ಕೆ ಅನುಕೂಲ ಮಾಡುತ್ತೇವೆ ಎಂದರು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಭಿ: ಅಧ್ಯಕ್ಷ ಸ್ಥಾನ ಬದಲಾವಣೆ, ಸಂಪುಟ ಪುನರ್ ರಚನೆ ವಿಚಾರ ಹೈ ಕಮಾಂಡ್‌ಗೆ ಬಿಟ್ಟಿದ್ದು ಎಂದರು

Tags :
#FIR#ನಕ್ಸಲ್‌#ಮಂಗಳೂರು#ಸ್ವಾಮೀಜಿ
Next Article