ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಅನ್ನದಾತನ ಜಮೀನ ತಂದು ಎಂದು ಹೇಳುವ ಹಕ್ಕು ಅವರಿಗಿಲ್ಲ…

11:40 AM Oct 26, 2024 IST | Samyukta Karnataka

ಸರ್ಕಾರದ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ

ಬೆಂಗಳೂರು: ವಕ್ಫ್ ಪರ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರೈತರ ಜಮೀನುಗಳಲ್ಲಿನ ಪಹಣಿ ಪತ್ರದಲ್ಲಿನ ಕಾಲಂ ನಂಬರ್ 11ರ ಋಣಗಳು ಕಾಲಂನಲ್ಲಿ “ಕರ್ನಾಟಕ ವಕ್ಫ್​ ಬೋರ್ಡ್ ಬೆಂಗಳೂರು ಮಸಜಿತ್ (ಸುನ್ನಿ) ವಕ್ಫ್​​” ಎಂದು ನಮೂದಿಸಿರುವುದಾಗಿ ನಮ್ಮ ವಿಜಯಪುರದ ರೈತರು ತಿಳಿಸಿದ್ದಾರೆ. ಕೇಂದ್ರದಲ್ಲಿ ವಿವಾದಿತ ಕಾಯ್ದೆ ಮರುಪರಿಶೀಲನೆಗಾಗಿ ಜಂಟಿ ಸಂಸತ್ ಸಮಿತಿ ರಚನೆಯಾಗಿರುವಾಗ ತರಾತುರಿಯಲ್ಲಿ ಪಹಣಿಯನ್ನು ಬದಲಿಸಿ ವಕ್ಫ್ ಬೋರ್ಡ್ ಹೆಸರು ನಮೂದಿಸಿರುವ ವಕ್ಫ್ ಈ ನಿರಂಕುಶ ನಡೆ ಖಂಡನೀಯ ಹಾಗೂ ಅಸಂವಿಧಾನಿಕವಾಗಿದೆ. ಅನ್ನದಾತನ ಜಮೀನನ್ನು ತಂದು ಎಂದು ಹೇಳುವ ಹಕ್ಕು ವಕ್ಫ್ ಅವರಿಗಿಲ್ಲ. ಯಾವುದೋ ಒಂದು ಸಮುದಾಯದ ತುಷ್ಟೀಕರಣ ಮಾಡಲು ನಾಡಿನ ಅನ್ನದಾತಾರನ್ನು ಒಕ್ಕಲೆಬ್ಬಿಸಲು ಹೊರಟಿರುವ ಈ ಕ್ರಮ ಸರ್ಕಾರದ ಆದ್ಯತೆಗಳನ್ನು ತಿಳಿಸುತ್ತದೆ. ಜಂಟಿ ಸಂಸತ್ ಸಮಿತಿಯ ಆದೇಶ ಹಾಗೂ ಶಿಫಾರಸುಗಳು ಹೊರ ಬರುವವರೆಗೂ ರೈತರ ಪಹಣಿ ಯಥಾಸ್ಥಿತಿಯಂತೆ (status quo) ಇರಬೇಕು. ಸರ್ಕಾರ ಈ ನಿರ್ಣಯ ವಾಪಾಸ್ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಈ ವಕ್ಫ್ ಪರ ಸರ್ಕಾರದ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡುವುದು ನಿಶ್ಚಿತ ಎಂದಿದ್ದಾರೆ.

Tags :
#ಅನ್ನದಾತ#ಯತ್ನಾಳ್‌#ವಕ್ಫ್‌#ವಿಜಯಪುರ#ಹೋರಾಟ
Next Article