ಅಪಘಾತವಾದ ಹೆಬ್ಬಾಳ್ಕರ್ ಕಾರಲ್ಲಿ ಏನಿತ್ತು..?
ಛಲವಾದಿ ನಾರಾಯಣ ಸ್ವಾಮಿ ಪ್ರಶ್ನೆ
ಬೆಂಗಳೂರು: ಸಚಿವೆ ಹೆಬ್ಬಾಳ್ಕರ್ ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಹಣ ಸಾಗಿಸಲು ಹೋಗಿದ್ದೀರು ಎಂಬ ಆರೋಪ ಇದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ
ಈ ಕುರಿತಂತೆ ಮಾತನಾಡಿರುವ ಅವರು ಹೆಬ್ಬಾಳ್ಕರ್ ಅವರೇ ಅಪಘಾತವಾದ ಆ ಕಾರಲ್ಲಿ ಯಾರು ಯಾರು ಇದ್ದರು, ನೀವು ಸಚಿವರಾಗಿ, ಸರ್ಕಾರಿ ಕಾರು ಇದ್ದು, ಸೆಕ್ಯೂರಿಟಿ ಇದ್ದು, ಇಷ್ಟೆಲ್ಲ ಇದ್ದು.. ಇವರನ್ನು ಬಿಟ್ಟು ಯಾಕೆ ಟ್ರಾವೆಲ್ ಮಾಡಿದ್ರಿ, ಬೆಳಗ್ಗೆ ಎದ್ದು ವಿಮಾನದಲ್ಲಿ ಹೋಗಬಹುದಿತ್ತು, ಅಷ್ಟು ಅರ್ಜೆಂಟ್‌ನಲ್ಲಿ ಯಾಕೆ ಹೋದ್ರಿ, ಅಪಘಾತ ಆಗಿದ್ದು ಯಾಕೆ ಎಂಬುದನ್ನು ಜನರಿಗೆ ಹೇಳಿ ಎಂದು ಒತ್ತಾಯಿಸಿದ್ದಾರೆ. ನೀವು ಕಾರಿನಲ್ಲಿ ಹಣ ಸಾಗಿಸಲು ಹೋಗಿದ್ದೀರಿ ಎಂಬ ಆರೋಪ ಇದೆ, ದೊಡ್ಡ ಅಮೌಂಟ್ ಅನ್ನು ಸಾಗಿಸಲು ಹೋಗಿ ಈ ಅಪಘಾತ ಆಗಿದೆ ಎನ್ನಲಾಗುತ್ತಿದೆ, ಪೊಲೀಸ್ ಬೆಂಗಾವಲಿನಲ್ಲೇ ಕಾರ್ ಲಿಫ್ಟ್ ಮಾಡಿದ್ದು ಯಾಕೆ? ಆ ಡ್ರೈವರ್ ಯಾರು? ಎಲ್ಲಿದ್ದಾನೆ? ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ. ಇನ್ನು ನಾಯಿ ಎದುರು ಬಂದಾಗ ಈ ಘಟನೆ ಆಯ್ತು ಅಂತೀರಿ? ಅಲ್ಲದೇ ಹಿಂದಿನಿಂದ ಬಂದು ಗುದ್ದಿದ್ದಾರೆ ಅಂದಿದ್ದೀರಿ. ಹಾಗಾದ್ರೆ ಇದರಲ್ಲಿ ಯಾವುದು ಸತ್ಯ? ಈ ಎಲ್ಲದರ ಬಗ್ಗೆ ಶೀಘ್ರವೇ ತನಿಖೆ ಆಗಬೇಕು. ಒಬ್ಬರು ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು. ಇದನ್ನು ತಪ್ಪುದಾರಿಗೆ ಎಳೆಯಬಾರದು. ಅದರಲ್ಲಿ ಯಾರೆಲ್ಲಾ ಪ್ರಯಾಣ ಮಾಡುತ್ತಿದ್ದರು ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕಾರಿನಲ್ಲಿ ಬಹಳ ಮೊತ್ತದ ಬ್ಯಾಗ್ ಇತ್ತೆಂದು ಎನ್ನಲಾಗಿದೆ. ಇದನ್ನು ಯಾಕೆ ಮಹಜರು ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.