For the best experience, open
https://m.samyuktakarnataka.in
on your mobile browser.

ಕಸಕ್ಕೆ ತಗುಲಿದ ಬೆಂಕಿ: ಇಲಾಖಾ ವಾಹನಗಳು ಸುಟ್ಟು ಭಸ್ಮ

01:51 PM Apr 06, 2024 IST | Samyukta Karnataka
ಕಸಕ್ಕೆ ತಗುಲಿದ ಬೆಂಕಿ  ಇಲಾಖಾ ವಾಹನಗಳು ಸುಟ್ಟು ಭಸ್ಮ

ಕುಷ್ಟಗಿ: ಪಟ್ಟಣದ ಲೋಕಪಯೋಗಿ ಕಚೇರಿ ಆವರಣದಲ್ಲಿ ಕಸಕ್ಕೆ ಬೆಂಕಿ ತಗುಲಿ ಗುಜರಿ ಸೇರಬೇಕಿದ್ದ ಹಳೆಯ ವಾಹನಗಳು ಸಹ ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ಲೋಕೋಪಯೋಗಿ ಕಚೇರಿಯ ಹಿಂಭಾಗದಲ್ಲಿ ಒಣ ಗಿಡಗಳಿದ್ದು ಕಿಡಿಗೇಡಿಗಳು ಸಿಗರೇಟ್ ಸೇದಿ ನಂದಿಸಿದೆ ಬಿಸಾಡಿದ್ದರಿಂದ, ಕಸದ ರಾಸಿಗೆ ಬೆಂಕಿ ತಗುಲಿ ಬಿಸಿಲಿನ ದಗೆಯಿಂದ ಸಣ್ಣದಾಗಿ ಬೆಂಕಿ ಹತ್ತಿಕೊಂಡಿದ್ದು, ಕ್ಷಣಮಾತ್ರದಲ್ಲಿ ಬೆಂಕಿ ದಗದಗನೆ ಉರಿಯಲು ಆರಂಭಿಸಿದೆ.
ಇಲಾಖೆಯ ಹಳೆಯ ರೋಲರ್, ಟಿಪ್ಪರ್, ಜೀಪ್‌ಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಎಲ್ ಟಿ ವಿದ್ಯುತ್ ಲೈನ್ ಕೆಳಗಡೆ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿ ವಿದ್ಯುತ್ ಸಂಚಾರ ಕಡಿತ ಗೊಳಿಸಿದ್ದರಿಂದ ಹೆಚ್ಚಿನ ಅವಘಡ ಆಗದಂತೆ ತಡೆದಿದ್ದಾರೆ. ಲೋಕೋಪಯೋಗಿ ಇಲಾಖೆಯ ಪಕ್ಕದಲ್ಲಿ ತಾಲೂಕು ಪಂಚಾಯಿತಿ ಕಟ್ಟಡಗಳು ಹಾಗೂ ವಾಣಿಜ್ಯ ಮಳಿಗೆಗಳಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಿದ್ದಾರೆ. ಯಾರೋ ಬೀಡಿ, ಸಿಗರೇಟು ಸೇದಿ ಎಸೆದ ಪರಿಣಾಮ ಒಣಗಿದ ಕಸಕಡ್ಡಿಗೆ ಕಿಡಿ ತಗುಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ಶಂಕಿಸಿದ್ದಾರೆ.