For the best experience, open
https://m.samyuktakarnataka.in
on your mobile browser.

ದಾಖಲೆ ಇಲ್ಲದೇ ಸಾಗಾಟ; ೨ ಕೋಟಿ ಹಣ ವಶಕ್ಕೆ

10:28 PM Apr 15, 2024 IST | Samyukta Karnataka
ದಾಖಲೆ ಇಲ್ಲದೇ ಸಾಗಾಟ  ೨ ಕೋಟಿ ಹಣ ವಶಕ್ಕೆ

ಹುಬ್ಬಳ್ಳಿ: ದಾಖಲೆ ಇಲ್ಲದೇ ಸಾಗಿಸಲಾದ ೨,೨.೪೨೦೦೦ ಹಣವನ್ನು ಕುಂದಗೋಳ ತಾಲೂಕಿನ ರಾಮನಕೊಪ್ಪದ ಚೆಕ್‌ಪೋಸ್ಟ್ ಅಧಿಕಾರಿಗಳು ರಾಮನಕೊಪ್ಪ ಗ್ರಾಮದ ನಿಂಗಪ್ಪ ಎಂಬುವರ ಮನೆಯಲ್ಲಿ ವಶಪಡಿಸಿಕೊಂಡಿದ್ದಾರೆ.
ರಾಮನಕೊಪ್ಪ ಚೆಕ್‌ಪೋಸ್ಟ್‌ನಲ್ಲಿ ಅನುಮಾನಾಸ್ಪದವಾಗ ಬಂದ ಎರಡು ಕಾರು (ಬ್ರಿಜಾ ಮತ್ತು ಹುಂಡೈ) ಕಾರನ್ನು ಚೆಕ್‌ಪೋಸ್ಟ್ನಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ಆದರೆ, ಕಾರು ನಿಲ್ಲಿಸದೇ ವೇಗವಾಗಿ ಸಾಗಿದ್ದರಿಂದ ಚೆಕ್ ಪೋಸ್ಟ್ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆನ್ನಟ್ಟಿದ್ದಾರೆ. ವೇಗವಾಗಿ ಸಾಗಿದ ಕಾರುಗಳು ರಾಮನಕೊಪ್ಪದ ನಿಂಗಪ್ಪ ಜಾಟರ್ ಎಂಬುವವರ ಮನೆ ಮುಂದೆ ನಿಲುಗಡೆ ಮಾಡಿ ಹಣವಿದ್ದ ಬ್ಯಾಗುಗಳನ್ನು ಅವರ ಮನೆಯೊಳಗೆ ಸಾಗಿಸುವಾಗ ಚೆಕ್ ಪೋಸ್ಟ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ೫ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಶಕ್ಕೆ ಪಡೆದ ಐವರು, ಜಮೀನು ಖರೀದಿಗೆ ಸಂಬಂಧಿಸಿದ ಹಣವನ್ನು ನೀಡಲು ತಾವು ಬಂದಿದ್ದಾಗ ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆದರೆ, ದಾಖಲೆ ಒದಗಿಸದ ಕಾರಣ ರಾತ್ರಿ ೯ ಗಂಟೆಯಾದರೂ ಹಣದ ಎಣಿಕೆ ಕಾರ್ಯ ಮುಂದುವರಿಸಿದ್ದರು. ವಶಕ್ಕೆ ಪಡೆದವರಿಂದ ಒಟ್ಟು ೨,೨,೪೨೦೦೦ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಚುನಾವಣಾಧಿಕಾರಿ ಹೇಳಿಕೆ: ಹಣಸಾಗಿಸುತ್ತಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಚೆಕ್ ಪೋಸ್ಟ್ ಅಧಿಕಾರಿಗಳು ಎಣಿಕೆ ಕಾರ್ಯ ನಡೆಸುತ್ತಿದ್ದು, ವಿವರ ಲಭಿಸಿದ ತಕ್ಷಣ ಪೂರ್ಣ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.