For the best experience, open
https://m.samyuktakarnataka.in
on your mobile browser.

ಮೆಣಸಿನಕಾಯಿ ದರ ಕುಸಿತ: ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ ರೈತರು

08:19 PM Mar 11, 2024 IST | Samyukta Karnataka
ಮೆಣಸಿನಕಾಯಿ ದರ ಕುಸಿತ  ಎಪಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ ರೈತರು

ಬ್ಯಾಡಗಿ: ಒಣ ಮೆಣಸಿನಕಾಯಿ ದರ ಕುಸಿತದಿಂದ ಹಿನ್ನೆಲೆಯಲ್ಲಿ ಟೆಂಡರ್‌ಗೆ ಇಟ್ಟಿದ್ದ ಸಾವಿರಾರು ರೈತರು ದರಪಟ್ಟಿ ಬರುತ್ತಿದ್ದಂತೆ ಆಕ್ರೋಶಗೊಂಡ ರೈತರರು ಕೃಷಿ ಉತ್ಪನ್ನ ಮಾರುಕಟ್ಟೆ ಕಛೇರಿಗೆ ಮುತ್ತಿಗೆ ಹಾಕಿ ಕಛೇರಿಯಲ್ಲಿರುವ ಕಂಪ್ಯೂಟರ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒಡೆದು ಹಾಕಿದಲ್ಲದೇ, ಕಛೇರಿ ವಾಹನ ಪೈಯರ್ ಎಂಜಿನ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬ್ಯಾಡಗಿ ಒಣ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ಸೋಮವಾರ ಮಾರುಕಟ್ಟೆಗೆ ೩ ಲಕ್ಷ ೧೩ ಸಾವಿರ ಮೆಣಸಿನಕಾಯಿ ಚೀಲ ಆವಕವಾಗಿತ್ತು, ಕಳೆದ ವಾರಕ್ಕಿಂತಲೂ ಈ ವಾರ ಬೆಲೆಯಲ್ಲಿ ಕಡಿಮೆಯಾಗಿದೆ ಎಂದು ರೈತರು ಆರೋಪಿಸಿದರಲ್ಲದೇ, ಕ್ವಿಂಟಲ್‌ಗೆ 3ರಿಂದ 5 ಸಾವಿರ ರೂ. ದರ ಕುಸಿತವಾಗಿದೆ ಎಂದು ದಿಢೀರನೆ ಆಗಮಿಸಿದ ರೈತರು ಕಚೇರಿಗೆ ತೆರಳಿ ಸಿಬ್ಬಂದಿಗಳ ಮೆಲೆ ಹಲ್ಲೆ ಮಾಡಿದರು. ಬಳಿಕ ಪೊಲೀಸ್‌ರು ಹಾಗೂ ಅಗ್ನಿಶಾಮಕ ಸಿಬ್ಬಂದಿಯನ್ನು ಹೊಡೆದು ಓಡಿಸಿದ ಘಟನೆ ಜರುಗಿತು. ಕ್ಷಣಾರ್ಧದಲ್ಲಿ ನಡೆದ ಘಟನೆಗೆ ಮಾರುಕಟ್ಟೆಯಲ್ಲಿ ವರ್ತಕರು, ದಲಾಲಲರು, ಕೂಲಿ ಕಾರ್ಮಿಕರು, ಹಮಾಲರು ಬೆಚ್ಚಿಬಿದ್ದರು. ರೈತರು ಕೈಗೆ ಸಿಕ್ಕ ಕಲ್ಲು ಬಡಿಗೆಗಳಿಂದ ವಾಹನ ಹಾಗೂ ಕಛೆರಿಯಲ್ಲಿನ ಪಿಠೋಪಕರಣಗಳನ್ನು ಒಡೆದು ಹಾಕಿದರು.
ಸಾವಿರಾರು ರೈತರು ದಿಡೀರನೆ ಆಗಮಿಸಿ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟಿದ್ದ ಪೊಲೀಸ್‌ರು ದಿಕ್ಕುತೋಚದಂತಾದರು. ಬೆಂಕಿ ನಂದಿಸಲು ಆಗಮಿಸಿದ ಅಗ್ನಿಶಾಮಕ ವಾಹನಕ್ಕೂ ಬೆಂಕಿ ಹಚ್ಚಿದ್ದರಿಂದ ಮತ್ತಷ್ಟು ಬೀಗುವಿನ ವಾತಾವರಣ ಸೃಷ್ಠಿಯಾಯಿತು. ಸಿಬ್ಬಂದಿಗಳ ಜೊತೆ ಸಮಾಧಾನದಿಂಧ ಮಾತು ಕಥೆಯನ್ನು ನಡೆಸಿದ ಒಂದು ಕ್ಷಣ ಕಾನೂನನ್ನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡಲು ಮುಂದಾದ ಘಟನೆ ಜರುಗಿತು.