ಅಪರಿಚಿತ ವಾಹನ ದ್ವಿಚಕ್ರವಾಹನಕ್ಕೆ ಡಿಕ್ಕಿ: ಇಬ್ಬರು ಮಹಿಳೆಯರು ಸಾವು
ತಿರುಪತಿಗೆ ಹೊರಟವರು ವೈಕುಂಠ ಸೇರಿದರು.
ಮೇಲುಕೋಟೆ: ಮಹದೇಶ್ವರಪುರ ದೇವಾಲದ ಬಳಿ ಶನಿವಾರ ಮುಂಜಾನೆ 5 ಗಂಟೆ ಸಮಯದಲ್ಲಿ ಅಪರಿಚಿತ ವಾಹನ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಮಹಿಳೆ ಸ್ಥಳದಲ್ಲಿ ಸಾವನ್ನಪ್ಪಿದ್ದು. ಮತ್ತೊರ್ವ ಮಹಿಳೆ ಆಸ್ವತ್ರೆಗೆ ರವಾನಿಸುವ ವೇಳೆ ದಾರಿಮಧ್ಯೆ ಸಾವನ್ನಪಿದ್ದಾರೆ ಮತ್ತೊಂದು ಮಹಿಳೆ ಸ್ಥಿತಿ ತೀರ ಗಂಭೀರವಾಗಿದ್ದು ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಮೈಸೂರು - ಜೀವರ್ಗಿ ಹೆದ್ದಾರಿಯಲ್ಲಿಯ ನಡೆದಿರುವ ಅಘಘಾತವಾಗಿದೆ. ಹೋಬಳಿ ನೀಲನಹಳ್ಳಿ ಗ್ರಾಮದ ಸಂಧ್ಯಾ19 ವರ್ಷ, ಶಿಲ್ಪ 35 ವರ್ಷ ಮೃತಪಟ್ಟವರು. ಮತ್ತೊರ್ವ ಮಹಿಳೆ ಶೈಲಜ ಸ್ಥಿತಿ ತೀರ ಗಂಭೀರವಾಗಿದ್ದು ಮೈಸೂರಿನ ಖಾಸಗಿ ಆಸ್ವತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವವರ: ನೀಲನಹಳ್ಳಿ ಗ್ರಾಮದ ಶೈಲಜ ಹಾಗೂ ಶಿಲ್ಪ ತಿರುಪತಿಗೆ ತೆರಳಲು ಆದೇ ಗ್ರಾಮದ ಸಂಧ್ಯಾ ಯುವತಿಗೆ ಸ್ಕೂಟಿಯಲ್ಲಿ ಸಮೀಪದ ಮಹದೇಶ್ವರ ಬಸ್ ನಿಲ್ದಾಣದ ವರೆಗೂ ಡ್ರಾಪ್ ಮಾಡುವಂತೆ ಕರೆದುಕೊಂಡು ಹೋಗಿದ್ರು. ಆದರೆ ಮುಂಜಾನೆ ಅತಿವೇಗದಲ್ಲಿ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ. ಈ ಸಂಬಂಧ ಮೇಲುಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.