For the best experience, open
https://m.samyuktakarnataka.in
on your mobile browser.

ಅಪಾಯದ ಮಟ್ಟ ಮೀರಿ ತುಂಗಭದ್ರೆ ಆರ್ಭಟ..

07:46 PM Aug 01, 2024 IST | Samyukta Karnataka
ಅಪಾಯದ ಮಟ್ಟ ಮೀರಿ ತುಂಗಭದ್ರೆ ಆರ್ಭಟ

ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ಅಂದಾಜು ೨ ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದ್ದು, ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ಹಂಪಿಯ ಬಹುತೇಕ ಸ್ಮಾರಕಗಳು ಮುಳುಗಡೆಯಾಗಿವೆ. ನದಿ ಪಾತ್ರದ ಕೃಷಿ ಭೂಮಿಗಳಿಗೆ ನೀರು ನುಗಿದ್ದು ಬೆಳೆಗಳಿಗೆ ಹಾನಿಯಾಗಿದೆ.
ಜಲಾಶಯಕ್ಕೆ ೨೮ ಗೇಟ್ ೪ ಅಡಿ, ೫ ಗೇಟ್ ಒಂದೂವರೆ ಅಡಿಗೆ ಎತ್ತರಿಸಿ ನದಿಗೆ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹಂಪಿಯ ಕೋದಂಡ ರಾಮಸ್ವಾಮಿ ದೇಗುಲದ ಗರ್ಭಗುಡಿಯ ಮೆಟ್ಟಿಲ ವರೆಗೆ ಹಾಗೂ ಸೀತೆ ಸೆರಗು-ಸುಗ್ರೀವ ಗುಹೆ ಮೂಲಕ ನದಿ ನೀರು ರಭಸವಾಗಿ ಹರಿಯುತ್ತಿದೆ.
೧೬೩೩ ಅಡಿಯ ಜಲಾಶಯದಲ್ಲಿ ೧೬೩೦.೯೨ ಅಡಿಗೆ ೯೭.೫೦೧ ಟಿಎಂಸಿ ನೀರು ಸಂಗ್ರಹವಾಗಿದೆ. ೧.೯೬ ಲಕ್ಷ ಕ್ಯೂಸೆಕ್ ಒಳಹರಿವಿದೆ.