For the best experience, open
https://m.samyuktakarnataka.in
on your mobile browser.

ಅಮೃತ ಸಮಾಚಾರ

11:36 AM Jan 04, 2024 IST | Samyukta Karnataka
ಅಮೃತ ಸಮಾಚಾರ

೪-೧-೧೯೪೮ ಮಂಗಳವಾರ

ವಿಜ್ಞಾನದ ಪ್ರಗತಿಯಾದರೂ ಜ್ಞಾನದ ಪ್ರಗತಿಯಾಗಿಲ್ಲ
ಅಲ್ಹಾಬಾದ - ಸುಖ, ಶಾಂತಿ ಸ್ಥಾಪನೆಗೆ ವಿಜ್ಞಾನವು ಎಂತು ಸಹಾಯ ಮಾಡಬಲ್ಲದೆಂಬದನ್ನು ಜಗತ್ತಿನ ವಿಜ್ಞಾನಿಗಳು ಗಂಭೀರವಾಗಿ ಆಲೋಚಿಸಬೇಕೆಂದು ಪ್ರಧಾನ ಮಂತ್ರಿ ಪಂ. ಜವಾಹರಲಾಲರು ಇಂದು ಮಧ್ಯಾನ್ಹ ಇಲ್ಲಿಯ ವಿಶ್ವವಿದ್ಯಾಲಯದ ಸಿನೇಟ ಭವನದಲ್ಲಿ ಸೇರಿದ ಹಿಂದೀ ವಿಜ್ಞಾನ ಸಂಘದ ೩೬ನೇ ಅಧಿವೇಶನವನ್ನು ಉದ್ಘಾಟಿಸುತ್ತ ಭಿನ್ನಹ ಮಾಡಿಕೊಂಡರು.
ಕೆಲವು ವಿದೇಶಿಯ ವಿಜ್ಞಾನ ವಿದ್ವಾನ್ಮಗಳನ್ನೊಳಗೊಂಡು ೬೦೦ ಕ್ಕಿಂತ ಹೆಚ್ಚು ಪ್ರತಿನಿಧಿಗಳು ಆಗಮಿಸಿದ್ದರು. ಸಂಯುಕ್ತ ಪ್ರಾಂತದ ಮುಖ್ಯಮಂತ್ರಿ ಪಂ. ಗೋವಿಂದ ವಲ್ಲಭಪಂತರು ಮುಖ್ಯ ಅತಿಥಿಗಳನ್ನೂ ಸದಸ್ಯರನ್ನೂ ಸ್ವಾಗತಿಸಿದರು.

ಸ್ವತಂತ್ರ ಭಾರತದ ಕಾಯಿದೆ ಮಂಡಲ ರಚನೆ
ಹೊಸದಿಲ್ಲಿ - ಸ್ವತಂತ್ರ ಹಿಂದುಸ್ತಾನದ ಕಾಯಿದೆ ಮಂಡಲ ಹಾಗೂ ಅವುಗಳ ಚುನಾವಣೆಗೆ ಸಂಬಂಧಿಸಿದ ಕಲಮುಗಳು ಇಂದು ಘಟನಾ ಸಮಿತಿಯಲ್ಲಿ ಚರ್ಚಿಸಲ್ಪಟ್ಟವು ಮುಂದಿನ ಚುನಾವಣೆಯ ಸಿದ್ಧತೆಯು ಅವಸರದಿಮದ ನಡೆಯಬೇಕಾಗಿರುವದರಿಂದ ಈ ಕಲಮುಗಳನ್ನು ಮೊದಲು ಚರ್ಚೆಗೆ ತೆಗೆದುಕೊಳ್ಳಲಾಯಿತು.
ಇದಕ್ಕಿಂತ ಪೂರ್ವದಲ್ಲಿ, ಸಭೆ ಪ್ರಾರಂಭವಾದೊಡನೆ ಉಪಾಧ್ಯಕ್ಷ ಶ್ರೀ ಮೂಕರ್ಜಿಯವರ ಸೂಚನೆಯಂತೆ, ಸಭೆಯು ಒಂದು ನಿಮಿಷ ಮೌನದಿಂದ ಎದ್ದು ನಿಂತು, ಕಾಶ್ಮೀರದಲ್ಲಿ ಯುದ್ಧ ನಿಂತ ಬಗ್ಗೆ ಪರಮಾತ್ಮನಿಗೆ ಕೃತಜ್ಞತೆಯನ್ನು ಸಲ್ಲಿಸಿತು.