For the best experience, open
https://m.samyuktakarnataka.in
on your mobile browser.

ಅರಸು ಉದ್ಘಾಟಿಸಿದ ಜಲಾಶಯಕ್ಕೆ ಆಗಮಿಸುತ್ತಿರುವ ಸಿಎಂ

11:41 AM Oct 14, 2024 IST | Samyukta Karnataka
ಅರಸು ಉದ್ಘಾಟಿಸಿದ ಜಲಾಶಯಕ್ಕೆ ಆಗಮಿಸುತ್ತಿರುವ ಸಿಎಂ

ಬಳ್ಳಾರಿ: ಸಂಡೂರಿನಲ್ಲಿರುವ ನಾರಿಹಳ್ಳ ಕಿರು ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸುವ ಹಿನ್ನೆಲೆಯಲ್ಲಿ ಕಿರು ಜಲಾಶಯ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
0.810 ಟಿಎಂಸಿ ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜಲಾಶಯವನ್ನು ೧೯೭೨ರಲ್ಲಿ‌ ಲೋಕಾರ್ಪಣೆ ಮಾಡಲಾಗಿತ್ತು. ಆಗಿನ ಸಿಎಂ ದೇವರಾಜು ಅರಸು ಅವರು ಜಲಾಶಯವನ್ನು ಉದ್ಘಾಟಿಸಿದ್ದರು. 615 ಕಿಮೀ ವಿಸ್ತೀರ್ಣ ಹೊಂದಿರುವ ಕಿರು ಜಲಾಶಯ ಸಂಡೂರು ಪಟ್ಟಣ ಸೇರಿ ವಿವಿಧ ಗ್ರಾಮ ಕುಡಿಯುವ ನೀರಿಗೆ ಆಧಾರವಾಗಿದೆ. ಐದು ಕ್ರಸ್ಟ್‌ ಗೇಟ್‌ಗಳನ್ನ ಹೊಂದಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿರುವ ಕಿರು ಜಲಾಶಯಕ್ಕೆ ನೂರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಯ, ಸಿಎಂ ಆಗಮಿಸುವ ಹಿನ್ನೆಲೆಯಲ್ಲಿ ಯಾರನ್ನು ಬಿಡುತ್ತಿಲ್ಲ.

ಕೋತಿಗಳ ಕಾಟ: ನಿತ್ಯ ಜಲಾಶಯದ ಬಳಿ ನೂರಾರು ಸಂಖ್ಯೆಯಲ್ಲಿ ಕೋತಿಗಳಿ ಜಮಾಯಿಸುತ್ತವೆ. ಇವತ್ತು ಕೂಡ ಕೋತಿಗಳು ಜಮಾವಣೆಗೊಂಡಿವೆ. ಪೆಂಡಾಲ್, ಬಾಗೀನ ಅರ್ಪಣೆ ಸಾಮಗ್ರಿಗಳನ್ನು ದಕ್ಕೆ ಮಾಡುತ್ತವೆ ಎನ್ನುವ ಕಾರಣಕ್ಕೆ ಪಟಾಕಿ ಸಿಡಿಸಿ ಕೋತಿಗಳನ್ನು ಓಡಿಸುತ್ತಿರುವುದು ಕಂಡು ಬಂತು.

Tags :