For the best experience, open
https://m.samyuktakarnataka.in
on your mobile browser.

ಆಕಸ್ಮಿಕ ಬೆಂಕಿಗೆ 10 ಕೋಟಿ ರೂ. ಮೌಲ್ಯದ ಮತ್ಸ್ಯ ಉತ್ಪನ್ನ ಬೆಂಕಿಗಾಹುತಿ

05:39 PM Jul 14, 2024 IST | Samyukta Karnataka
ಆಕಸ್ಮಿಕ ಬೆಂಕಿಗೆ 10 ಕೋಟಿ ರೂ  ಮೌಲ್ಯದ ಮತ್ಸ್ಯ ಉತ್ಪನ್ನ ಬೆಂಕಿಗಾಹುತಿ

ಸುರತ್ಕಲ್‌ನ ಮಂಗಳೂರು ವಿಶೇಷ ಆರ್ಥಿಕ ವಲಯ(ಎಂಎಸ್‌ಇಝಡ್‌)ದಲ್ಲಿ ಕಾರ್ಯಾಚರಿಸುತ್ತಿರುವ ಅಥೆಂಟಿಕ್‌ ಓಷನ್‌ ಟ್ರಶನರ್‌ನಲ್ಲಿ ಭಾನುವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 10 ಕೋಟಿ ರು. ನಷ್ಟ ಅಂದಾಜಿಸಲಾಗಿದೆ.
ಅದೃಷ್ಟವಶಾತ್‌ ಕಂಪನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದುದರಿಂದ ನೌಕರರು ಯಾರೂ ಇರಲಿಲ್ಲ. ಹಾಗಾಗಿ ಯಾವುದೇ ಸಾವು, ನೋವು ಸಂಭವಿಸಿಲ್ಲ. ಈ ಕಂಪನಿ ಮೀನನ್ನು ಸ್ವಚ್ಛಗೊಳಿಸಿ ಮಾಂಸದ ರೂಪಕ್ಕೆ ಪರಿವರ್ತಿಸಿ 10 ಕೇಜಿ ಪ್ಯಾಕ್‌ಗಳನ್ನಾಗಿ ಮಾಡಿ ವಿದೇಶಗಳಿಗೆ ರಫ್ತು ಮಾಡುತ್ತಿದೆ. ಈ ಕಂಪನಿಯ ಕೋಲ್ಡ್‌ ಸ್ಟೋರೇಜ್‌ ಹಾಗೂ ಕಟ್ಟಿಂಗ್‌ ವಿಭಾಗದಲ್ಲಿ ದುರಸ್ತಿ ಕೆಲಸ ನಡೆಯುತ್ತಿತ್ತು. ಈ ವೇಳೆ ಕೋಲ್ಡ್‌ ಸ್ಟೋರೇಜ್‌ ವಿಭಾಗದಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಬೆಂಕಿಯ ಕೆನ್ನಾಲಗೆ ಆಗಸದೆತ್ತರಕ್ಕೆ ಉಗುಳುತ್ತಿರುವ ದೃಶ್ಯ ವಿಡಿಯೋಗಳಲ್ಲಿ ಸೆರೆಯಾಗಿದೆ.

ಅಗ್ನಿ ಅವಘಡದಿಂದ ಸುಮಾರು 10 ಕೋಟಿ ರು. ಮೌಲ್ಯದ ಮೀನಿನ ಉತ್ಪನ್ನಗಳು ಬೆಂಕಿಗಾಹುತಿಯಾಗಿದೆ ಎಂದು ಹೇಳಲಾಗಿದೆ. ಎಂಆರ್‌ಪಿಎಲ್‌, ಗೇಲ್‌ ಇಂಡಿಯಾ ಕಂಪನಿಗಳ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ.