For the best experience, open
https://m.samyuktakarnataka.in
on your mobile browser.

ಆತಿಶಿಗೆ ಆಯೋಗದ ನೋಟಿಸ್

11:20 PM Apr 05, 2024 IST | Samyukta Karnataka
ಆತಿಶಿಗೆ ಆಯೋಗದ ನೋಟಿಸ್

ನವದೆಹಲಿ: ಬಿಜೆಪಿ ಒತ್ತಡದ ತಂತ್ರಗಳನ್ನು ಬಳಸುತ್ತಿದ್ದು, ತಮ್ಮ ಪಕ್ಷ ಸೇರುವಂತೆ ಕಮಲ ಪಕ್ಷದ ನಾಯಕರು ಒತ್ತಡ ಹೇರಿದ್ದರು. ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು ಎಂದಿದ್ದ ಆಪ್ ನಾಯಕಿ ಅತಿಶಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ನೀವು ದೆಹಲಿ ಸಚಿವ ಸ್ಥಾನದಲ್ಲಿದ್ದು, ಮಾತಿಗೆ ಬೆಲೆ ಇರುತ್ತದೆ. ಹೀಗಾಗಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಶನಿವಾರ ಸಂಜೆ ೫ ಗಂಟೆ ಒಳಗೆ ಪುರಾವೆ ಒದಗಿಸುವಂತೆ ಆಯೋಗ ಕೇಳಿದೆ.
`ನನ್ನ ಕೈಗೆ ಆಯೋಗದ ನೋಟಿಸ್ ತಲುಪುವ ಮೊದಲೇ ಟಿವಿಗಳಲ್ಲಿ ಅದು ಪ್ರಸಾರವಾಗಿದೆ' ಎಂದು ಅತಿಶಿ, ಚುನಾವಣಾ ಆಯೋಗವು ಬಿಜೆಪಿಯ ಅಂಗಸಂಸ್ಥೆಯಾಗಿದೆಯೇ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಗುರುವಾದಂದು ನನ್ನ ಪತ್ರಿಕಾಗೋಷ್ಠಿಯ ಕುರಿತು ಬಿಜೆಪಿ ಆಯೋಗಕ್ಕೆ ದೂರು ನೀಡಿತ್ತು. ಶುಕ್ರವಾರ ಬೆಳಗ್ಗೆ ೧೧.೧೫ಕ್ಕೆ ಸುದ್ದಿ ವಾಹಿನಿಗಳು ನನಗೆ ನೋಟಿಸ್ ಜಾರಿಯಾಗಿರುವ ಕುರಿತು ವರದಿಗಳನ್ನು ಪ್ರಸಾರ ಮಾಡಿದವು. ಅದಾದ ಅರ್ಧ ಗಂಟೆ ನಂತರ ಮೇಲ್ ಮೂಲಕ ನೋಟಿಸ್ ಬಂದಿದೆ. ಚುನಾವಣಾ ಆಯೋಗವು ಬಿಜೆಪಿಯ ಅಂಗಸಂಸ್ಥೆಯಾಗಿದೆಯೇ? ಎಂದು ಪ್ರಶ್ನಿಸಿದರು.
ಅತಿಶಿ ಹೇಳಿಕೆ ಆಧಾರರಹಿತ ಎಂದಿರುವ ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್, ಆರೋಪವನ್ನು ಸಮರ್ಥಿಸಲು ಸಾಕ್ಷ್ಯವನ್ನು ನೀಡುವಂತೆ ಆಯೋಗ ಕೇಳಿದೆ. ದೆಹಲಿ ಸಚಿವರ ವಿರುದ್ಧ ಬಿಜೆಪಿ ಮಾನನಷ್ಟ ನೋಟಿಸ್ ಸಹ ಹೂಡಿದೆ ಎಂದಿದ್ದಾರೆ.