For the best experience, open
https://m.samyuktakarnataka.in
on your mobile browser.

ಆದಾಯ ತೆರಿಗೆ ನಿಯಮ ಇಂದಿನಿಂದ ಮಾರ್ಪಾಟು

12:05 AM Apr 01, 2024 IST | Samyukta Karnataka
ಆದಾಯ ತೆರಿಗೆ ನಿಯಮ ಇಂದಿನಿಂದ ಮಾರ್ಪಾಟು

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ ತಿಂಗಳ ಆರಂಭದಲ್ಲಿ ಮಂಡಿಸಿದ ಕೇಂದ್ರ ಬಜೆಟ್‌ನಂತೆ ಏಪ್ರಿಲ್ ೧ರಿಂದ ಆದಾಯ ತೆರಿಗೆ ಪದ್ದತಿಯಲ್ಲಿ ಕೆಲವು ಬದಲಾವಣೆಗಳಾಗಲಿವೆ.
ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಅದರಂತೆ ೩,೦೦,೦೦೧ರಿಂದ ಆರು ಲಕ್ಷದವರೆಗೆ ಶೇ.೫, ೬,೦೦,೦೦೧ರಿಂದ ೯ ಲಕ್ಷದವರೆಗೆ ಶೇ.೧೦., ೯,೦೦,೦೦೧ರಿಂದ ೧೨ ಲಕ್ಷ ರೂ.ವರೆಗೆ ಶೇ.೧೫ ಹಾಗೂ ೧೨,೦೦,೦೦೧ರಿಂದ ೧೫,೦೦,೦೦೦ರವರೆಗೆ ಶೇ.೨೦ ಹಾಗೂ ೧೫,೦೦,೦೦೧ರಿಂದ ಮೇಲ್ಪಟ್ಟ ಆದಾಯ ಮೇಲೆ ಶೇ.೩೦ ತೆರಿಗೆ ವಿಧಿಸಲಾಗುತ್ತದೆ.
ಹೊಸ ತೆರಿಗೆ ಪದ್ದತಿಯಡಿ ೫ ಕೋಟಿಗಿಂತ ಮೇಲ್ಪಟ್ಟ ಆದಾಯ ಮೇಲೆ ವಿಧಿಸಲಾಗುತ್ತಿದ್ದ ಶೇ.೩೭ರ ಸರ್ಚಾರ್ಜ್ ದರ ಈಗ ಶೇ.೨೫ಕ್ಕೆ ಇಳಿಯಲಿದೆ.
೭ ಲಕ್ಷಕ್ಕಿಂತ ಹೆಚ್ಚು ಆದಾಯ ಮೇಲೆ ವಿಧಿಸಲಾಗುತ್ತಿದ್ದ ರಿಯಾಯಿತಿ ಮಿತಿಯನ್ನು ೨೫ ಸಾವಿರಕ್ಕೆ ಹೆಚ್ಚಿಸಲಾಗುತ್ತಿದೆ. ಕುಟುಂಬ ಪಿಂಚಣಿ ಆದಾಯದಿಂದ ೧೫ ಸಾವಿರ ರೂ ಅಥವಾ ಶೇ ೧/೩ರಂತೆ ಕಡಿತ ಮಾಡಲಾಗುತ್ತದೆ. ರಜೆಗೆ ಸಂಬಂಧಿಸಿದ ನಗದೀಕರಣ ಕುರಿತಂತೆ ಸರ್ಕಾರೇತರ ನೌಕರರಿಗೆ ವಿನಾಯಿತಿ ಮಿತಿಯನ್ನು ೨೫ ಲಕ್ಷ ರೂ.ವರೆಗೆ ನೀಡಲಾಗುತ್ತಿದೆ.
ವಿಮಾ ಪಾಲಿಸಿಯಿಂದ ಬರುವ ಆದಾಯ ೫ ಲಕ್ಷ ಮೇಲ್ಪಟ್ಟರೆ ತೆರಿಗೆಗೆ ಒಳಪಡುತ್ತದೆ.