ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆಧಾರ್, ಪ್ಯಾನ್ ವಿವರ ಬಹಿರಂಗಪಡಿಸುವ ಜಾಲತಾಣಕ್ಕೆ ನಿರ್ಬಂಧ

02:28 PM Sep 27, 2024 IST | Samyukta Karnataka

ನವದೆಹಲಿ: ದೇಶದ ನಾಗರಿಕರ ಆಧಾರ್ ಮತ್ತು ಪ್ಯಾನ್ ವಿವರಗಳನ್ನು ಬಹಿರಂಗಪಡಿಸುವ ಜಾಲತಾಣಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ.
ಕೆಲವು ವೆಬ್‌ಸೈಟ್‌ಗಳು ಭಾರತೀಯ ನಾಗರಿಕರ ಆಧಾರ್ ಮತ್ತು ಪ್ಯಾನ್ ಕಾರ್ಡ್ ವಿವರಗಳು ಸೇರಿದಂತೆ ಸೂಕ್ಷ್ಮವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುತ್ತಿವೆ ಎಂಬುದು ಎಂಇಐಟಿವೈ ಗಮನಕ್ಕೆ ಬಂದಿದೆ. ಸುರಕ್ಷಿತ ಸೈಬರ್ ಭದ್ರತಾ ಅಭ್ಯಾಸಗಳು ಮತ್ತು ವೈಯಕ್ತಿಕ ಡೇಟಾದ ರಕ್ಷಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆಧಾರ್ ಮತ್ತು ಪ್ಯಾನ್ ಕಾರ್ಡ್ ಹಾಗೂ ವೈಯಕ್ತುಕ ವಿವರಗಳನ್ನು ಬಹಿರಂಗಪಡಿಸುವ ಜಾಲತಾಣಗಳನ್ನು ಗುರುತಿಸಿರುವ ಸರ್ಕಾರ, ಈ ತಾಣಗಳ ಮುಖ್ಯಸ್ಥರಿಗೆ ಬದಲಾವಣೆಗಳನ್ನು ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದೆ. ಆಧಾರ್ ಕಾಯ್ದೆ -2016 ಕಲಂ 29(4)ರ ಅಡಿ ಆಧಾರ್ ಮಾಹಿತಿ ಸಾರ್ವಜನಿಕವಾಗಿ ಪ್ರದರ್ಶಿಸುವುದು ಅಪರಾಧವಾಗಿದೆ.

Tags :
#Aadhaar#PAN#ನಿರ್ಬಂಧ
Next Article