For the best experience, open
https://m.samyuktakarnataka.in
on your mobile browser.

ಆನ್‌ಲೈನ್‌ ಗೇಮ್ ವ್ಯಸನಗಳಿಗೆ ಅಂಕುಶ ಹಾಕುವ ತುರ್ತು ಅವಶ್ಯಕತೆ

11:36 AM Jan 15, 2025 IST | Samyukta Karnataka
ಆನ್‌ಲೈನ್‌ ಗೇಮ್ ವ್ಯಸನಗಳಿಗೆ ಅಂಕುಶ ಹಾಕುವ ತುರ್ತು ಅವಶ್ಯಕತೆ

ಬಾಳನ್ನು ಹಾಳು ಮಾಡುತ್ತಿರುವ ಈ ಪಿಡುಗನ್ನು ಸರ್ಕಾರ ನಿಷೇಧಿಸಲಿ

ಬೆಂಗಳೂರು: ಆನ್‌ಲೈನ್‌ ಗೇಮ್ ವ್ಯಸನಗಳಿಗೆ ಅಂಕುಶ ಹಾಕುವ ತುರ್ತು ಅವಶ್ಯಕತೆ ಇದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ಕರ್ನಾಟಕ ವರದಿ ಹಂಚಿಕೊಂಡು ಪೋಸ್ಟ್‌ ಮಾಡಿದ್ದು ಆನ್ಲೈನ್ ಗೇಮ್ ನಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬಂದಿವೆ. ಸರ್ಕಾರ ಈ ರೀತಿಯಾದ ವ್ಯಸನಗಳಿಗೆ ಅಂಕುಶ ಹಾಕುವ ತುರ್ತು ಅವಶ್ಯಕತೆ ಇದೆ. ಆನ್ಲೈನ್ ಗೇಮ್ ಗಳನ್ನು ಆಡಿ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾದ ಹಲವು ಪ್ರಕರಣಗಳು ನಮ್ಮ ಮುಂದಿವೆ. ಕುಟುಂಬದ ಜವಾಬ್ದಾರಿ, ನಿರ್ವಹಣೆ ಹೊತ್ತಬೇಕಾದವರೇ ಈ ರೀತಿಯಾದ ದುಶ್ಚಟಗಳಲ್ಲಿ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡು ಜೀವ ಕಳೆದುಕೊಳ್ಳುತ್ತಿರುವುದು ದುರದೃಷ್ಟಕರ ಎಂದಿದ್ದಾರೆ. ಯುವಕರನ್ನು ಸೇರಿದಂತೆ ಅನೇಕರ ಬಾಳನ್ನು ಹಾಳು ಮಾಡುತ್ತಿರುವ ಈ ಪಿಡುಗನ್ನು ಸರ್ಕಾರ ನಿಷೇಧಿಸಲಿ ಎಂದಿದ್ದಾರೆ.

Tags :