ಆಪರೇಶನ್ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು
ಹುಬ್ಬಳ್ಳಿ : ಆಫರೇಶನ್ ಕಮಲ ಕುರಿತು ಬಿಜೆಪಿಯವರದ್ದು ಪ್ರಯತ್ನ ಇದ್ದೇ ಇದೆ. ಕಳೆದ16 ತಿಂಗಳುಗಳಿಂದ ಬಿಜೆಪಿಯವರು ಆಪರೇಶನ್ ಕಮಲದ ಪ್ರಯತ್ನದಲ್ಲೇ ಇದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಶನ್ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರು. ಅನೇಕ ರಾಜ್ಯಗಳಲ್ಲಿ ಬಿಜೆಪಿ ಆಪರೇಶನ್‌ಗೆ ಮಾಡಿಯೇ ಅಧಿಕಾರದ ಗದ್ದುಗೆ ಏರಿದ್ದಾರೆ. ಕರ್ನಾಟಕದಲ್ಲೂ ಆಪರೇಶನ್‌ಗೆ ಬಿಜೆಪಿಯವರು ಮುಂದಾಗಿದ್ದಾರೆ.
ಬಿಜೆಪಿಯಿಂದ 50 ಕೋಟಿ ಆಫರ್ ವಿಚಾರ, ಅವರ ಪ್ರಯತ್ನ ಯಾವುದೇ ಕಾರಣಕ್ಕೂ ಫಲಪ್ರದವಾಗಲ್ಲ ಎಂದರು.
ಕೋವಿಡ್ ಹಗರಣದ ತನಿಖೆ: ಜಸ್ಟಿಸ್ ಕುನ್ಹಾ ಅವರ ವರದಿಯನ್ನ ಅವರು ಚಾಲೆಂಜ್ ಮಾಡಲಿ. ಚಾಲೆಂಜ್ ಮಾಡಲು ಅವಕಾಶವಿದೆ. ಅವರ ಮೇಲೆ ಯಾವುದೇ ವಿಚಾರಣೆಯನ್ನೇ ಮಾಡಬಾರದಾ..? ಪ್ರಹ್ಲಾದ್ ಜೋಶಿಯವರು ಆ ರೀತಿ ಮಾತನಾಡುವುದು ಸರಿಯಲ್ಲ. ನ್ಯಾಯಾಂಗಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು. ಯಾವುದು ಸರಿ ಯಾವುದು ತಪ್ಪು ಅಂತಾ ಆಲೋಚನೆ ಮಾಡಬೇಕು. ಮೂರುಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಒಲವು ಇದೆ ಎಂದರು.
ಜಮೀರ್ ಅಹ್ಮದ್ ಹೇಳಿಕೆ : ಸಿ.ಪಿ.ಯೋಗೇಶ್ವರ ಹತಾಶ ಹೇಳಿಕೆ ವಿಚಾರ ಅದು ಅವರನ್ನೇ ಕೇಳಬೇಕು ನನಗೆ ಗೊತ್ತಿಲ್ಲ.
ಸ್ಮಾರ್ಟ್ ಸಿಟಿ : ದೇಶದಲ್ಲಿ 70 ವರ್ಷದಿಂದ ನಾವು ಹಾಕಿದ ಬುನಾದಿ ಏನೂ ಆಗಿಲ್ಲ, ಬಿಜೆಪಿಯವರು 11 ವರ್ಷದಲ್ಲಿ ಕಟ್ಟಿದ ಕಟ್ಟಡಗಳು ಬೀಳುವ ಪರಿಸ್ಥಿತಿ ಬಂದಿವೆ ಎಂದು ಲಾಡ್ ವ್ಯಂಗ್ಯವಾಡಿದರು.