ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆರಾಮಾಗಿರೋದೇ ಜೀವ್ನ ಅಲ್ಲ..!

08:36 PM Nov 23, 2024 IST | Samyukta Karnataka

ಸಿನಿಮಾ: ಆರಾಮ್ ಅರವಿಂದಸ್ವಾಮಿ
ನಿರ್ದೇಶನ: ಅಭಿಷೇಕ್ ಶೆಟ್ಟಿ
ನಿರ್ಮಾಣ: ಶ್ರೀಕಾಂತ್ ಪ್ರಸನ್ನ, ಪ್ರಶಾಂತ್ ರೆಡ್ಡಿ
ತಾರಾಗಣ: ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್, ಮಂಜುನಾಥ್ ಹೆಗಡೆ, ರಾಘು ರಾಮನಕೊಪ್ಪ, ಗೌರವ್ ಶೆಟ್ಟಿ ಇತರರು.
ರೇಟಿಂಗ್ಸ್: ೩.೫
-ಗಣೇಶ್ ರಾಣೆಬೆನ್ನೂರು

ಯಾವುದೇ ಕೆಲಸವಿಲ್ಲದೇ ಖಾಲಿ ಜೇಬಿನ ಜೀವನ ನಡೆಸುವುದೇ ಆರಾಮು ಎಂದುಕೊಂಡಿರುವ ನಾಯಕ. ಮಾತೇ ಬಂಡವಾಳ, ದೌಲತ್ತಿಗೇನೂ ಕಮ್ಮಿಯಿಲ್ಲ..! ಆದರೆ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಬೇಕು, ದುಡ್ಡಿರಬೇಕು ಎಂಬೆಲ್ಲ ಕನಸುಗಳಿಗೇನೂ ಕೊರತೆಯಿಲ್ಲದ ಅರವಿಂದಸ್ವಾಮಿ’ ಬಾಳಿನಲ್ಲಿಆರಾಮಾ…’ ಎಂಬ ಪದವೇ ಖುಷಿ ಮತ್ತು ದುಃಖಕ್ಕೆ ಕಾರಣವಾಗುತ್ತದೆ. ಅದರ ಸುತ್ತ ನಿರ್ದೇಶಕ ಅಭಿಷೇಕ್ ಶೆಟ್ಟಿ ಕಥೆ ಹೆಣೆದಿದ್ದಾರೆ. ಒಂದಷ್ಟು ಮನರಂಜನೆ, ಪ್ರೀತಿ, ಸೆಂಟಿಮೆಂಟು… ಇಡೀ ಸಿನಿಮಾದ ಹೂರಣ.
ಸಾಮಾನ್ಯವಾಗಿ ಅನೀಶ್ ನಟನೆಯ ಈವರೆಗಿನ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ಸ್ ಕಡೆ ಹೆಚ್ಚು ಗಮನ ಹರಿಸಲಾಗಿತ್ತು. ಹೀಗಾಗಿ ಆ್ಯಕ್ಷನ್ ಹೇರಳವಾಗಿರುತ್ತಿದ್ದವು. ಆದರೆ ಅರವಿಂದಸ್ವಾಮಿ’ ಗುಣವೇ ಬೇರೆ. ಸ್ಟೈಲು ಕೂಡ ಹೊಸತು. ಹೀಗಾಗಿ ಇಲ್ಲಿ ನಗುವಿಗೆ ಬರವಿಲ್ಲ. ಪ್ರೀತಿಗಂತೂ ಕೊರತೆಯೇ ಇಲ್ಲ. ಹಾಗಾದರೆ ಕೊರತೆಯಾದರೂ ಏನು..? ಅರವಿಂದಸ್ವಾಮಿಗೆ ಎಲ್ಲವೂ ತುಸು ಹೆಚ್ಚೇ ಎಂಬಂತೆ ವಾತಾವರಣವಿರುತ್ತದೆ. ಆದರೆಸ್ವಾಮಿ’ ಅಂದುಕೊಂಡಿದ್ದೇ ಒಂದು… ಆಗೋದೇ ಇನ್ನೊಂದು..! ಅಸಲಿಗೆ ಆತ ಅಚ್ಛೇ ದಿನ್ ಯಾವಾಗ..?’ ಎಂಬ ನಿರೀಕ್ಷೆಯಲ್ಲಿರುತ್ತಾನೆ. ತಾನೊಂದು ಬಗೆದರೆ ದೈವ ಬೇರೊಂದು ಬಗೆಯುತ್ತದೆ ಎಂಬಂತೆ ಅರವಿಂದಸ್ವಾಮಿ ಬಾಳಿನಲ್ಲಿ ವಿಚಿತ್ರ ಘಟನೆಗಳು ನಡೆಯುತ್ತವೆ. ಇದರಿಂದ ಆತನ ಬಾಳಿನಲ್ಲಿಆರಾಮ್’ ಎಂಬುದೇ ಕಂಟಕವಾಗುತ್ತದೆ. ಮುಂದೇನು..?
ಮೊದಲಾರ್ಧ ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದರೆ, ದ್ವಿತೀಯಾರ್ಧ ನಾಯಕನ ವೇದನೆ, ಮತ್ತೊಂದು ಮಜಲಿನ ಜೀವನದ ಮುಖ ಅನಾವರಣವಾಗುತ್ತದೆ. ಇಬ್ಬರು ನಾಯಕಿರಿದ್ದರೂ ಕೊನೆಗೆ ಅರವಿಂದನ ಬಾಳು ಬೆಳಗುವವರು ಯಾರು ಎಂಬುದು ಗಮನಾರ್ಹ ಸಂಗತಿ.
ಅನೀಶ್ ತೇಜೇಶ್ವರ್ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಅರವಿಂದನಾಗಿ ನಗಿಸುತ್ತಾರೆ… ಅಳಿಸುವ ಪ್ರಯತ್ನ ಮಾಡುತ್ತಾರೆ. ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ಮಂಜುನಾಥ್ ಹೆಗಡೆ, ರಾಘು ರಾಮನಕೊಪ್ಪ, ಗೌರವ್ ಶೆಟ್ಟಿ ಮೊದಲಾದವರು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ಅರ್ಜುನ್ ಜನ್ಯ ಹಾಡುಗಳಲ್ಲಿ ಒಂದೆರಡು ಕೇಳಬಲ್.

Next Article