ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆರು ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ

09:42 PM Apr 24, 2024 IST | Samyukta Karnataka

ಹುಬ್ಬಳ್ಳಿ: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನಿಗದಿತ ದಿನಾಂಕಗಳಂದು ಈ ಕೆಳಗಿನ ಆರು ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಯನ್ನು ಜೋಡಿಸಲಾಗುವುದು ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.
ಬೆಳಗಾವಿ-ಮೈಸೂರು ಎಕ್ಸ್ ಪ್ರೆಸ್ ರೈಲು ಏಪ್ರಿಲ್ ೨೪ ರಿಂದ ಮೇ ೧ರವರೆಗೆ (ರೈಲು ಸಂಖ್ಯೆ ೧೭೩೦೨), ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲು ಏಪ್ರಿಲ್ ೨೫ ರಿಂದ ಮೇ ೨ರವರೆಗೆ (ರೈಲು ಸಂಖ್ಯೆ ೦೬೨೩೩), ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ರೈಲು ಏಪ್ರಿಲ್ ೨೫ ರಿಂದ ಮೇ ೨ರವರೆಗೆ (ರೈಲು ಸಂಖ್ಯೆ ೦೬೨೩೪ ), ಮೈಸೂರು-ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು ಏಪ್ರಿಲ್ ೨೫ ರಿಂದ ಮೇ ೨ರವರೆಗೆ (೪. ರೈಲು ಸಂಖ್ಯೆ ೧೭೩೦೭), ಬಾಗಲಕೋಟೆ-ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ಏಪ್ರಿಲ್ ೨೬ ರಿಂದ ಮೇ ೩ರವರೆಗೆ (ರೈಲು ಸಂಖ್ಯೆ೧೭೩೦೮ ),ಮೈಸೂರು-ಬೆಳಗಾವಿ ಎಕ್ಸ್ ಪ್ರೆಸ್ ರೈಲು ಏಪ್ರಿಲ್ ೨೭ ರಿಂದ ಮೇ ೪ ರವರೆ. (ರೈಲು ಸಂಖ್ಯೆ೧೭೩೦೧).

Next Article