ಆರೋಗ್ಯವರ್ಧಕ ಬೆಳ್ಳುಳ್ಳಿ
11:30 AM Jul 06, 2024 IST | Samyukta Karnataka
ಮಳೆಗಾಲದಲ್ಲಿ ಬೆಳ್ಳುಳ್ಳಿ ಆರೋಗ್ಯವರ್ಧಕ ವಸ್ತುವಾಗಿದೆ. ರೋಗ ನಿರೋಧಕ ಶಕ್ತಿ ಹೊಂದಿದೆ. ವಿವಿಧ ಸೋಂಕುಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ. ಇದು ಉಸಿರಾಟದ ಪ್ರದೇಶದಿಂದ ಲೋಳೆಯ ಬಿಡುಗಡೆಯನ್ನು ಹೆಚ್ಚಿಸುವ ಮೂಲಕ ಶೀತ ಮತ್ತು ಕೆಮ್ಮಿನ ಲಕ್ಷಣ ನಿರ್ವಹಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಅಂಶದಿಂದಾಗಿ ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ.
ಬೆಳ್ಳುಳ್ಳಿಯಲ್ಲಿರುವ ಪೌಷ್ಟಿಕಾಂಶಗಳು: ಮ್ಯಾಂಗನೀಸ್, ವಿಟಮಿನ್ ಬಿ೬, ವಿಟಮಿನ್ ಸಿ, ಸೆಲೆನಿಯಮ್, ಫೈಬರ್, ಕ್ಯಾಲ್ಸಿಯಮ್, ತಾಮ್ರ, ಪೊಟ್ಯಾಸಿಯಮ್, ಕಬ್ಬಿಣ ಇತ್ಯಾದಿ ಅಂಶಗಳು ಇದರಲ್ಲಿವೆ.
ಉಪಯೋಗಗಳು: ಕೆಮ್ಮು, ಶೀತ ನಿವಾರಿಸುತ್ತದೆ. ಕೆಮ್ಮು ಹಾಗೂ ಶೀತದ ಸೋಂಕನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ.
- ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಲಸಿನ್ ಎಂಬ ಅಂಶವು ಕೊಲೆಸ್ಟಾçಲ್ ಮಟ್ಟ ಕಡಿಮೆ ಮಾಡುತ್ತದೆ.
- ಮೆದುಳಿನ ಕಾರ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ. ಬುದ್ಧಿಮಾಂದ್ಯತೆಯAತಹ ಕಾಯಿಲೆಗಳ ವಿರುದ್ಧ ಪರಿಣಾಮಕಾರಿಯಾಗಿದೆ.
- ಜೀರ್ಣಕ್ರಿಯೆ ಸುಧಾರಿಸುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ಕರುಳಿನ ಹುಳಗಳ ನಿರ್ಮೂಲನೆಗೆ ಸಹಾಯ ಮಾಡುತ್ತದೆ.
- ರಕ್ತದ ಸಕ್ಕರೆಯ ಪ್ರಮಾಣ ಸಮತೋಲನಗೊಳಿಸುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಚರ್ಮದ ಆರೋಗ್ಯ ಸುಧಾರಿಸುತ್ತದೆ.
: ಗಿರಿಜಾ ಎಸ್.ದೇಶಪಾಂಡೆ, ಬೆಂಗಳೂರು