ಚಿಕ್ಕಮಗಳೂರಲ್ಲಿ ಡೆಂಗ್ಯೂಗೆ ಮೊದಲ ಬಲಿ
11:33 AM Feb 08, 2024 IST | Samyukta Karnataka
ಚಿಕ್ಕಮಗಳೂರು: ಇಲ್ಲಿನ ಮಹಮ್ಮದ್ ಖಾನ್ ಗಲ್ಲಿ ನಿವಾಸಿ ಸಹರಾ ಬಾನು( 18 ) ಡೆಂಗ್ಯೂದಿಂದ ಮೃತಪಟ್ಟಿದ್ದಾರೆ. ಎಂಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಕಳೆದ ಎರಡು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದು ನಿನ್ನೆ ಸಂಜೆ ಮೃತಪಟ್ಟಿರುತ್ತಾರೆ. ಯುಜಿಡಿ ಅವ್ಯವಸ್ಥೆ ಕಾರಣ:ಕಳೆದ ನಾಲ್ಕು ತಿಂಗಳ ಹಿಂದೆ ಯುಜಿಡಿ ಪೈಪ್ ಬದಲಾವಣೆ ಮಾಡಲು ರಸ್ತೆ ಅಗೆದು, ರಸ್ತೆ ಕ್ಲಿಯರ್ ಮಾಡದೇ ಚರಂಡಿಯಲ್ಲಿ ಮಣ್ಣು, ಕಸ, ಕಡ್ಡಿ, ಕೊಳಚೆ ತುಂಬಿದ್ದು ಇಲ್ಲಿನ ನಿವಾಸಿಗಳು ನಗರಸಭೆ ಗಮನಕ್ಕೂ ತಂದಿದ್ದರು ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ ದೂರು ನೀಡಿದಾಗ ಕೆಲಸ ವಹಿಸಿಕೊಂಡ ಕಂಟ್ರಾಕ್ಟರ್ ಕಾಟಾಚಾರಕ್ಕೆ ಕೆಲಸ ನಿರ್ವಹಿಸಿ ತೆರಳುತ್ತಿದ್ದಾರೆ ಎನ್ನುವ ಆರೋಪವು ಇದ್ದು, ಅಕ್ಕಪಕ್ಕದ ಮನೆಯವರೂ ಕಸ ಕಡ್ಡಿಯನ್ನು ರಸ್ತೆಗೆ ಬಿಸಾಕುವ ಪರಿಪಾಠ ಹೊಂದಿದ್ದು ನಗರಸಭೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.