ಶುಗರ್ ಸೇರಿದಂತೆ 41 ಅಗತ್ಯ ಔಷಧಗಳ ಬೆಲೆ ಇಳಿಸಿದ ಕೇಂದ್ರ
08:00 PM May 16, 2024 IST | Samyukta Karnataka
ನವದೆಹಲಿ: ಸಕ್ಕರೆ ಕಾಯಿಲೆ ಸೇರಿದಂತೆ 41 ಅಗತ್ಯ ಔಷಧಗಳ ಬೆಲೆಯನ್ನು ಕೇಂದ್ರ ಸರ್ಕಾರ ಇಳಿಸಿದೆ.
ಔಷಧಗಳ ಬೆಲೆ ಇಳಿಕೆ ಮಾಡಿ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಆದೇಶ ಹೊರಡಿಸಿದೆ. ಮಧುಮೇಹ, ಹೃದ್ರೋಗ, ಯಕೃತ್ತಿನ ಸಮಸ್ಯೆ, ಆ್ಯಂಟಿಬಯೋಟಿಕ್ಸ್, ಮಲ್ಟಿ ವಿಟಮಿನ್ ಸೇರಿ ಹಲವು ಔಷಧಗಳ ಬೆಲೆಯನ್ನು ಎನ್‌ಪಿಪಿಎ ಇಳಿಕೆ ಮಾಡಿದೆ. ಜಗತ್ತಿನ ಅತಿ ಹೆಚ್ಚು ಮಧುಮೇಹಿಗಳು ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ.