ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆರ್‌ಎಸ್‌ಎಸ್‌: ಸರ್ಕಾರಿ ಸಿಬ್ಬಂದಿಗಳಿಗೆ ವಿಧಿಸಿದ್ದ ನಿಷೇಧ ವಾಪಸ್

10:52 AM Jul 22, 2024 IST | Samyukta Karnataka

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಅದರ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿರುವ ಸರ್ಕಾರಿ ನೌಕರರ ಮೇಲಿನ ದಶಕಗಳ ಹಿಂದಿನ ನಿಷೇಧವನ್ನು ತೆಗೆದುಹಾಕಿದೆ.
ಈ ಕುರಿತಂತೆ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಜುಲೈ 9 ರಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಹೊರಡಿಸಿದ ಉದ್ದೇಶಿತ ಆದೇಶವನ್ನು ರಮೇಶ್ ಹಂಚಿಕೊಂಡಿದ್ದಾರೆ,
1966 ರಿಂದ ಜಾರಿಯಲ್ಲಿದ್ದ RSS ಚಟುವಟಿಕೆಗಳಲ್ಲಿ ಸರ್ಕಾರಿ ಸಿಬ್ಬಂದಿ ಭಾಗವಹಿಸುವ ನಿಷೇಧವನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. 1948ರ ಫೆಬ್ರವರಿಯಲ್ಲಿ ಗಾಂಧೀಜಿ ಹತ್ಯೆಯಾದ ಬಳಿಕ ಸರ್ದಾರ್ ಪಟೇಲ್ ಅವರು ಆರ್ ಎಸ್ಎಸ್ ಅನ್ನು ನಿಷೇಧಿಸಿದ್ದರು. ಉತ್ತಮ ನಡವಳಿಕೆಯ ಭರವಸೆಯ ಮೇರೆಗೆ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು. ಆರ್ ಎಸ್ ಎಸ್ ಮೇಲಿನ ನಿಷೇಧವನ್ನು ತೆಗೆದುಹಾಕಿದ್ದನ್ನು ಟೀಕಿಸಿರುವ ಜೈರಾಮ್ ರಮೇಶ್, ಜೂನ್ 4, 2024 ರ ನಂತರ ಪ್ರಧಾನಿ ಮತ್ತು ಆರ್ ಎಸ್ಎಸ್ ನಡುವಿನ ಸಂಬಂಧಗಳು ಹದಗೆಟ್ಟಿವೆ. ಜುಲೈ 9, 2024 ರಂದು ವಾಜಪೇಯಿ ಪ್ರಧಾನಿಯಾಗಿದ್ದ ಅವಧಿಯಲ್ಲಿಯೂ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ತೆಗೆದುಹಾಕಲಾಯಿತು ಎಂದಿದ್ದಾರೆ.

Next Article