For the best experience, open
https://m.samyuktakarnataka.in
on your mobile browser.

ಆರ್ ಡಿ ಪಿ ಬಂಧನಕ್ಕೆ ವಿಳಂಬ: ಸಿಪಿಐ ಅಮಾನತು

02:35 PM Nov 22, 2023 IST | Samyukta Karnataka
ಆರ್ ಡಿ ಪಿ ಬಂಧನಕ್ಕೆ ವಿಳಂಬ  ಸಿಪಿಐ ಅಮಾನತು

ಕಲಬುರಗಿ: ಕೆ ಇ ಎ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಅಫಜಲಪುರ ಸಿಪಿಐ ಪಂಡಿತ್ ಸಗರ್ ಅಮಾನತು ಮಾಡಿ ಈಶಾನ್ಯ ವಲಯದ ಐಜಿಪಿ ಅಜಯ್ ಹಿಲೋರಿ ಆದೇಶಿಸಿದ್ದಾರೆ.

ಕೆ ಇ ಎ ಅಕ್ರಮದ ರೂವಾರಿ ಆರ್ ಡಿ ಪಾಟೀಲ್ ಕಲಬುರಗಿ ಯ ಜೇವರ್ಗಿ ರಸ್ತೆಯಲ್ಲಿರುವ ವರದಾ ನಗರದ ಮಹಾಲಕ್ಷ್ಮಿ ಅಪಾರ್ಟ್‌ಮೆಂಟ್ ನಿಂದ ತಪ್ಪಿಸಿಕೊಂಡ ಹಿನ್ನಲೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮಕ್ಕೆ‌ ಮುಂದಾಗಿದೆ.

ಅಪಾರ್ಟ್‌ಮೆಂಟ್ ನಲ್ಲಿರುವ ಮಾಹಿತಿ ಸಿಕ್ಕರು ಬಂಧನಕ್ಕೆ ತೆರಳಲು ನಿಧಾನ ಮಾಡಿದ ಆರೋಪ ಹಾಗೂ ಕರ್ತವ್ಯ ನಿರ್ಲಕ್ಷ್ಯ ಆರೋಪದ ಅಡಿಯಲ್ಲಿ ಅಮಾನತು‌ಮಾಡಿ ಆದೇಶ ಮಾಡಲಾಗಿದೆ.

ಕಣ್ಣೆದುರಿಂದಲೆ ಆರ್ ಡಿ ಪಾಟೀಲ್ ತಪ್ಪಿಸಿಕೊಂಡು ಹೋದ ಹಿನ್ನಲೆ ಅಮಾನತ್ತು

ನವೆಂಬರ್ 7 ರಂದು ಆರ್ ಡಿಪಿ ನಾಪತ್ತೆಯಾಗಿದ್ದ,

ಅದಾದ ಬಳಿಕ ಆರ್ ಡಿ ಪಿ ಯನ್ನ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ಕಲಬುರಗಿ ನಗರ ಪೊಲೀಸರು ಬಂಧಿಸಿ‌ ಕರೆತಂದಿದರು.

ಐಪಿಎಸ್ ಅಧಿಕಾರಿಗೆ ಡಿವೈಎಸ್ ಪಿಯಿಂದಲೇ ತನಿಖೆ?

ಆರ್.ಡಿ ಇರುವ ಬಗ್ಗೆ ಐಪಿಎಸ್ ಅಧಿಕಾರಿಗೆ ಬಂದ ಮಾಹಿತಿ, ಹಾಗೂ ಅವರು ಸಿಪಿಐಗೇ ನೀಡಿದ ಮಾಹಿತಿ ಬಗ್ಗೆ ಡಿವೈಎಸ್‌ಪಿ ಕೆ. ಬಸವರಾಜ ತನಿಖೆ ನಡೆಸಿ ವರದಿ ಸಲ್ಲಿಸಿದ್ದಾರೆ.

ಐಪಿಎಸ್ ಅಧಿಕಾರಿ ತನಿಖೆ ನಂತರ ಸಿಪಿಐ ಕರ್ತವ್ಯಲೋಪದ ಬಗ್ಗೆ ಐಜಿಪಿಗೇ ವರದಿ ಸಲ್ಲಿಕೆ ಮಾಡಿದ್ದಾರೆ.

ಈ ಕುರಿತು ಈಶಾನ್ಯ ವಲಯ ಐಜಿಪಿ ಅಜಯ್ ಹಿಲೋರಿ ಅವರಿಗೆ ಡಿವೈಎಸ್ ಪಿ ನೀಡಿದ ವರದಿ ಆಧಾರಿಸಿ ಸಿಪಿಐ ಅಮಾನತು ಮಾಡಲಾಗಿದೆ.