ಆಸ್ಪತ್ರೆಯಲ್ಲಿಯೇ ಮಠದ ಉತ್ತರಾಧಿಕಾರಿ ನೇಮಕ
ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳಿಗೆ ಇತ್ತೀಚೆಗೆ ಹೃದಯಾಘಾತವಾಗಿದ್ದರಿಂದ ಕಳೆದ ಐದು ದಿನಗಳಿಂದ ಅವರಿಗೆ ನಗರದ ತತ್ವದರ್ಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಹುಬ್ಬಳ್ಳಿ: ಆಸ್ಪತ್ರೆ ಆವರಣದಲ್ಲಿ ಮಠದ ಉತ್ತರಾಕಾರಿಯ ನೇಮಕ ಮಾಡಲಾಗಿದೆ.
ತಾಲೂಕಿನ ಮಂಟೂರು ಶ್ರೀ ಅಡವಿ ಸಿದ್ಧೇಶ್ವರ ಹಾಗೂ ಸೊರಬ ತಾಲೂಕಿನ ಗೇರಕೊಪ್ಪ ಇಂಧುದರೇಶ್ವರ ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿಯೇ ಉತ್ತರಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಅಡವಿಸಿದ್ಧೇಶ್ವರ ಮಠದ ಉತ್ತರಾಕಾರಿಯಾಗಿ ಇಂಧುಧರ ದೇವರನ್ನು ನೇಮಕ ಮಾಡಲಾಯಿತು. ಎರಡು ಮಠಕ್ಕೆ ಪೂರ್ವ ನಿಯೋಜಿತ ಇಂಧುದರ ದೇವರನ್ನು ಬೊಮ್ಮನಹಳ್ಳಿ ಶಿವಯೋಗೇಶ್ವರ ಶ್ರೀ ಹಾಗೂ ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಘೋಷಣೆ ಮಾಡಲಾಯಿತು. ಮಠದ ಪೀಠಾಪತಿ ಶಿವಲಿಂಗೇಶ್ವರ ಶ್ರೀಗಳಿಗೆ ಇತ್ತೀಚೆಗೆ ಹೃದಯಾಘಾತವಾಗಿದ್ದರಿಂದ ಕಳೆದ ಐದು ದಿನಗಳಿಂದ ಅವರನ್ನು ನಗರದ ತತ್ವದರ್ಶಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಪಡೆಯುತ್ತಿದ್ದರು, ಈ ಮೊದಲೇ ಶಿವಲಿಂಗೇಶ್ವರ ಶ್ರೀಗಳು ನಿರ್ಧರಿಸಿದಂತೆ ಉತ್ತರಾಕಾರಿಯನ್ನು ಘೋಷಣೆ ಮಾಡಲಾಗಿದೆ ಎಂದು ಮಠದ ಭಕ್ತರು ಮಾಹಿತಿ ನೀಡಿದರು. ಇನ್ನೂ ಸ್ವತಃ ಉತ್ತರಾಧಿಕಾರಿ ಇಂದುಧರ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಹಿರಿಯ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ಶಿಷ್ಯ ಬಳಗದಲ್ಲಿ ನಾನು ಇದ್ದ ಕಾರಣ ನಮ್ಮ ಪೀಠಕ್ಕೆ ಆಸ್ಪತ್ರೆಯಲ್ಲಿಯೇ ಉತ್ತರಾಧಿಕಾರಿ ನೇಮಕ ಮಾಡಿದರು ಎಂದರು. ಇನ್ನೂ ಹುಬ್ಬಳ್ಳಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಸ್ಪತ್ರೆಗೆ ಬಂದು ಶಿವಲಿಂಗೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.