ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿ ಸಾವು
12:10 PM Nov 11, 2024 IST
|
Samyukta Karnataka
ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯ ನಾಲ್ಕನೇ ಮಹಡಿಯಿಂದ ಹಾರಿ ಬಾಣಂತಿಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಕಾರ್ಕಳದ ರಂಜಿತಾ (28) ಮೃತಪಟ್ಟವರು. ಅವರು ಹೆರಿಗೆಗಾಗಿ ಕಾರ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹಲವು ಕ್ಲಿಷ್ಟ ಆರೋಗ್ಯ ಸಮಸ್ಯೆಯಿಂದ ಲೇಡಿಗೋಷನ್ ಗೆ ಅ.28 ಕ್ಕೆ ದಾಖಲಾಗಿದ್ದರು. ಅ.30 ಕ್ಕೆ ಸಿಸೇರಿಯನ್ ಹೆರಿಗೆಯಾಗಿತ್ತು. ಮಗು ಎನ್ ಐಸಿಯುನಲ್ಲಿತ್ತು. ನ.3 ಕ್ಕೆ ಮಗು ಮೃತಪಟ್ಟಿತ್ತು. ಮಹಿಳೆ ಗುಣಮುಖರಾಗಿ ಸೋಮವಾರ ಡಿಸ್ಟಾರ್ಜ್ ಗೆಂದು ವೈದ್ಯರು ಸೂಚಿಸಿದ್ದರು. ಮನೆಯವರು ಕೂಡ ಸಿದ್ದರಾಗಿ ಬಂದಿದ್ದರು. ಆದರೆ ಮಹಿಳೆ ಏಕಾಏಕಿ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಕೂಡಲೇ ಮಹಿಳೆಯನ್ನು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಕೆ ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ವೈದ್ಯಾಧಿಕಾರಿಯವರು ತಿಳಿಸಿದ್ದಾರೆ.
Next Article