ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆ ಮಾತು ಸಿದ್ದರಾಮಯ್ಯನವರಿಗೆ ನೆನಪಿಲ್ಲವೇ?

12:39 PM Sep 30, 2024 IST | Samyukta Karnataka

ಆ ಮಾತಿನಂತೆ ನೀವು ಬದ್ಧತೆಯಿಂದ ನಡೆದುಕೊಳ್ಳುತ್ತೀರಿ ಎಂಬ ವಿಶ್ವಾಸ ಇದೆ,

ಮಂಗಳೂರು: ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುರಿತಂತೆ ಮಾತನಾಡಿ ಸಿದ್ದರಾಮಯ್ಯ ಕಳೆದ ಹತ್ತು ದಿನಗಳ ಹಿಂದೆ ನನ್ನ ನಲವತ್ತು ವರ್ಷಗಳ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದಿದ್ದರು, ಈಗ ಮುಡಾ ಹಗರಣದ ಬಗ್ಗೆ ನ್ಯಾಯಾಲಯ ತನಿಖೆಗೆ ಆದೇಶ ನೀಡಿದ ಬಳಿಕ ಕಾಂಗ್ರೆಸ್ ಪಟಾಲಂ ತನ್ನ ಸ್ಥಿಮಿತ ಕಳೆದುಕೊಂಡಿದೆ, ಕಾಂಗ್ರೆಸ್ ಮುಖಂಡರು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ, ಸಚಿವ ಜಮೀರ್ ಅಹಮ್ಮದ್ ನ್ಯಾಯಾಲಯದ ಆದೇಶ ರಾಜಕೀಯದ ಆದೇಶ ಎಂದು ಹೇಳಿದ್ದಾರೆ, ಕಾಂಗ್ರೆಸ್‌ನವರಿಗೆ ನ್ಯಾಯಾಲಯ ಹಾಗೂ ನ್ಯಾಯಧೀಶರ ಮೇಲೆ ಗೌರವ ಇಲ್ಲ, ಮಾತು ಮಾತಿಗೆ ಸಂವಿಧಾನದಂತೆ ನಡೆದುಕೊಳ್ಳುವೆ ಕಾನೂನಿಗೆ ತಲೆ ಬಾಗುವೆ ಎನ್ನುವ ಸಿದ್ದರಾಮಯ್ಯ ಪ್ರತಿಯೊಂದನ್ನು ಮರೆತಿದ್ದಾರೆ, 2012-13ರಲ್ಲಿ ಇದೆ ಸಿದ್ದರಾಮಯ್ಯ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ ರಾಜೀನಾಮೆಗೆ ಒತ್ತಾಯಿಸಿದ್ದರು, ಈಗ ಆ ಮಾತು ಸಿದ್ದರಾಮಯ್ಯನವರಿಗೆ ನೆನಪಿಲ್ಲವೇ? ಆ ಮಾತಿನಂತೆ ನೀವು ಬದ್ಧತೆಯಿಂದ ನಡೆದುಕೊಳ್ಳುತ್ತೀರಿ ಎಂಬ ವಿಶ್ವಾಸ ಇದೆ, ಬಂಡತನವನ್ನ ತೋರದೆ ಕರ್ನಾಟಕ ಜನರ ಆಸೆಯಂತೆ ಈ ಕೂಡಲೇ ರಾಜೀನಾಮೆಯನ್ನ ನೀಡಿ ಎಂದರು.

ನಿಷ್ಪಕ್ಷಪಾತ ತನಿಖೆಗೆ ಸಹಕರಿಸಬೇಕು : ಸಿದ್ದರಾಮಯ್ಯನವರ ಸಮಾಜವಾದ ಈಗ ಎಲ್ಲಿದೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕೊಲೆಗಡುಕರನ್ನ ರಕ್ಷಣೆ ಮಾಡುತ್ತಿದೆ, ಹಿಂದುಳಿದ ದಿನ ದಲಿತರ ಹಣವನ್ನ ಅಲ್ಪಸಂಖ್ಯಾತರಿಗೆ ಹಂಚುತ್ತಿದೆ, ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರೀತಿ ರಾಜಕೀಯ ಹೇಳಿಕೆ ಸಿದ್ಧರಾಮಯ್ಯ ನೀಡುತ್ತಿದ್ದಾರೆ, ನೈತಿಕ ಹೊಣೆ ಹೊತ್ತು ಈ ಕೂಡಲೇ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು

Tags :
#ಭಗವಂತಖೂಬಾ#ಮಂಗಳೂರು#ರಾಜೀನಾಮೆ#ಸಿದ್ದರಾಮಯ್ಯ
Next Article