ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಂಗ್ಲೆಂಡ್‌ನಲ್ಲಿದ್ದ ಬರೋಬ್ಬರಿ 100 ಟನ್ ಚಿನ್ನ ದೇಶಕ್ಕೆ ವಾಪಸ್

11:42 AM Jun 01, 2024 IST | Samyukta Karnataka

ಬೆಂಗಳೂರು: ಇಂಗ್ಲೆಂಡ್ ನಲ್ಲಿಟ್ಟಿದ್ದ ಬರೋಬ್ಬರಿ 100 ಟನ್ (1 ಲಕ್ಷ ಕೆ.ಜಿ) ಚಿನ್ನವನ್ನು ಇದೇ ಮೊದಲ ಬಾರಿಗೆ ದೇಶಕ್ಕೆ ವಾಪಸ್ ತರುವ ಮೂಲಕ ದೇಶೀಯ ಖಜಾನೆಯ ತೂಕ ಹೆಚ್ಚಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ,
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸ್ವಾತಂತ್ರ್ಯಾ ನಂತರ ದೇಶದ ಆಡಳಿತ ನಡೆಸಿದ್ದ ಕಾಂಗ್ರೆಸ್‌ ತನ್ನ ಭ್ರಷ್ಟಾಚಾರ, ದುರಾಡಳಿತದ ಪರಿಣಾಮ 1991 ರಲ್ಲಿ ದೇಶದ ಚಿನ್ನವನ್ನು ಇಂಗ್ಲೆಂಡ್‌ನಲ್ಲಿ ಅಡವಿಟ್ಟು ದೇಶ ಮುನ್ನಡೆಸಬೇಕಾದ ದುಸ್ಥಿತಿಗೆ ತಂದಿತ್ತು.

ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆರ್ಥಿಕ ನೀತಿಗಳಿಂದ ದೇಶದ ಹಣಕಾಸು ಸ್ಥಿತಿ ಉತ್ತಮ ಗೊಂಡಿದ್ದು, 60 ವರ್ಷಗಳಲ್ಲಿ ಕಾಂಗ್ರೆಸ್ ಮಾಡಿದ್ದ ಸಾಲವನ್ನು ಕೇವಲ 10 ವರ್ಷಗಳಲ್ಲಿ ತೀರಿಸುತ್ತಿರುವ ಮೋದಿ ಜೀ ಅವರ ಸರ್ಕಾರ ಇದೀಗ ಇಂಗ್ಲೆಂಡ್ ನಲ್ಲಿಟ್ಟಿದ್ದ ಬರೋಬ್ಬರಿ 100 ಟನ್ (1 ಲಕ್ಷ ಕೆ.ಜಿ) ಚಿನ್ನವನ್ನು ಇದೇ ಮೊದಲ ಬಾರಿಗೆ ದೇಶಕ್ಕೆ ವಾಪಸ್ ತರುವ ಮೂಲಕ ದೇಶೀಯ ಖಜಾನೆಯ ತೂಕ ಹೆಚ್ಚಿಸಿರುವುದು ಭಾರತೀಯರು ಹೆಮ್ಮೆಪಡುವಂತಾಗಿದೆ.

ತಾನೊಬ್ಬ ಪ್ರಧಾನ ಸೇವಕನಾಗಿ ದೇಶವನ್ನು ಕಾಯುವ ಕಾವಲುಗಾರ (ಚೌಕಿದಾರ್) ನಂತೆ ರಕ್ಷಿಸುವೆ ಎಂದು ಸಂಕಲ್ಪತೊಟ್ಟು ಅದರಂತೆ ಮಾನ್ಯ ನರೇಂದ್ರ ಮೋದಿಜೀ ಅವರು ಆಡಳಿತ ನಡೆಸುತ್ತಿರುವುದರ ಪ್ರತಿಫಲ ಹೊರ ಹೋಗಿದ್ದ ದೇಶದ ಸಂಪತ್ತು ವಾಪಸ್ಸು ಬರಲಾರಂಭಿಸಿವೆ ಇದಕ್ಕಾಗಿ ಮೋದಿ ಜೀ ಅವರನ್ನು ಅಭಿನಂದಿಸೋಣ ಎಂದಿದ್ದಾರೆ.

Next Article