For the best experience, open
https://m.samyuktakarnataka.in
on your mobile browser.

ಇಂದಿನಿಂದ ಬ್ರಾಂಡ್ ಮದ್ಯ ಬೆಲೆಯಲ್ಲಿ ಇಳಿಕೆ

12:01 AM Aug 27, 2024 IST | Samyukta Karnataka
ಇಂದಿನಿಂದ ಬ್ರಾಂಡ್ ಮದ್ಯ ಬೆಲೆಯಲ್ಲಿ ಇಳಿಕೆ

ಬೆಂಗಳೂರು: ಆ. ೨೭ರಿಂದ ಕೆಲ ಬ್ರಾಂಡ್ ಮದ್ಯ ಬೆಲೆ ಅಲ್ಪ ಇಳಿಕೆಯಾಗಲಿದೆ. ಭಾರತದಲ್ಲಿ ತಯಾರಿಸಿರುವ ಮದ್ಯದ (ಐಎಂಎಲ್) ಅಬಕಾರಿ ಸುಂಕದ ಸ್ಲ್ಯಾಬ್‌ಗಳ ಸಂಖ್ಯೆಯನ್ನು ಇತರೆ ರಾಜ್ಯಗಳ ಮದ್ಯದ ದರಕ್ಕೆ ಅನುಗುಣವಾಗಿ ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ಬೆಲೆಗಳನ್ನು (liquor price) ಪರಿಷ್ಕರಿಸಲು ರಾಜ್ಯ ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಲಿದ್ದು, ಪರಿಷ್ಕೃತ ದರ ಆಗಸ್ಟ್ ೨೭ರಿಂದಲೇ ಜಾರಿಗೆ ಬರಲಿದೆ.
ಈಗಾಗಲೇ ಕರಡು ಅಧಿಸೂಚನೆ ಹೊರಡಿಸಿ ಒಂದೂವರೆ ತಿಂಗಳಾದರೂ ಅಂತಿಮಗೊಳಿಸದ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್ ಗಳ ಮದ್ಯಕ್ಕೆ ಭಾರಿ ಕೊರತೆ ಉಂಟಾಗಿತ್ತು. ಇದೀಗ ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್ ಗಳ ಸಂಖ್ಯೆ ೧೮ ರಿಂದ ೧೬ಕ್ಕೆ ಇಳಿಸಲಾಗಿದೆ. ಆದರೆ ಮೊದಲ ಮೂರು ಸ್ಲ್ಯಾಬ್ ಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್ ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಉಳಿದಂತೆ ಐದನೇ ಸ್ಲಾಬ್ ಬಳಿಕ ೧೬ನೇ ಸ್ಲ್ಯಾಬ್ ವರೆಗೆ ದರ ಕಡಿಮೆಯಾಗಲಿದೆ. ಆ ಸ್ಲ್ಯಾಬ್‌ಗಳಲ್ಲಿನ ವಿಸ್ಕಿ, ರಮ್, ಬ್ರಾಂಡ್‌ಗಳ ಬೆಲೆ ಸಹಜವಾಗಿಯೇ ಕಡಿಮೆಯಾಗಲಿದೆ.