For the best experience, open
https://m.samyuktakarnataka.in
on your mobile browser.

ಇಂದಿನಿಂದ ಹಸಿರು ಹೈಡ್ರೋಜನ್ ಅಂತರರಾಷ್ಟ್ರೀಯ ಸಮ್ಮೇಳನ

11:39 AM Sep 11, 2024 IST | Samyukta Karnataka
ಇಂದಿನಿಂದ ಹಸಿರು ಹೈಡ್ರೋಜನ್ ಅಂತರರಾಷ್ಟ್ರೀಯ ಸಮ್ಮೇಳನ

ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಹಸಿರು ಹೈಡ್ರೋಜನ್ ಕುರಿತ ಅಂತರರಾಷ್ಟ್ರೀಯ ಸಮ್ಮೇಳನ ಪ್ರದರ್ಶನವನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ಈ ಪ್ರದರ್ಶನದಲ್ಲಿ ಪ್ರಪಂಚದಾದ್ಯಂತ 120 ಕ್ಕೂ ಹೆಚ್ಚು ಪ್ರದರ್ಶಕರು ಆಗಮಿಸಿದ್ದು, ಹಸಿರು ಹೈಡ್ರೋಜನ್ ವಲಯದಲ್ಲಿ ತಾಂತ್ರಿಕ ಪ್ರಗತಿಗಳು ಮತ್ತು ಅವಕಾಶಗಳ ತಿಳುವಳಿಕೆ ನೀಡಲಿದ್ದಾರೆ. ನವದೆಹಲಿಯ ಭಾರತ ಮಂಟಪದಲ್ಲಿ ಸೆಪ್ಟೆಂಬರ್ 11 ರಿಂದ 13 ರವರೆಗೆ ಈ ಪ್ರದರ್ಶನ ನಡೆಯಲಿದೆ.

Tags :