ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಂದು ಆಸ್ಕರ್‌ ನಾಮನಿರ್ದೇಶನ: ೮ ಭಾರತೀಯ ಚಿತ್ರಗಳು ಸ್ಪರ್ಧೆಯಲ್ಲಿ

05:07 AM Jan 23, 2025 IST | Samyukta Karnataka

ನ್ಯೂಯಾರ್ಕ್: ಸಿನಿಮಾರಂಗದ ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ೨೪ ವಿಭಾಗಗಳ ನಾಮನಿರ್ದೇಶನಗಳು ಗುರುವಾರ ಬಹಿರಂಗಗೊಳ್ಳಲಿವೆ. ಬೆವರಿಹಿಲ್‌ನಲ್ಲಿರುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಎಂಡ್ ಸಾಯಿನ್ಸ್ ಸ್ಯಾಮುವೆಲ್ ಗೋಲ್ಡ್ವಿನ್ ಥಿಯೇಟರ್‌ನಲ್ಲಿ ಈ ನಾಮನಿರ್ದೇಶನಗಳು ಘೋಷಣೆಯಾಗಲಿವೆ. ಆಸ್ಕರ್ ನಾಮನಿರ್ದೇಶನ ಸಮಾರಂಭ ಜನವರಿ ೧೭ರಂದು ನಡೆಯಬೇಕಾಗಿತ್ತು. ಆದರೆ ಲಾಸ್ ಏಂಜಿಲೀಸ್ ಕಾಡ್ಗಿಚ್ಚಿನ ಕಾರಣ ಅದನ್ನು ಜ.೧೯ಕ್ಕೆ ಮುಂದೂಡಲಾಯಿತು. ಇದೀಗ ಆಸ್ಕರ್ ಅಕಾಡೆಮಿ ಈಗ ಈ ಸಮಾರಂಭವನ್ನು ಗುರುವಾರ ನಡೆಸಲು ಮುಂದಾಗಿದೆ. ಭಾರತದ ಕಂಗುವಾ(ತಮಿಳು), ಆಡುಜೀವಿತಂ(ಹಿಂದಿ), ಸಂತೋಷ್(ಹಿಂದಿ), ಆಲ್ ವಿ ಇಮ್ಯಾಜಿನ್ ಆಸ್ ಲೈಟ್(ಹಿಂದಿ-ಇಂಗ್ಲಿಷ್), ಗರ್ಲ್ಸ್ ವಿಲ್ ಬಿ ಗರ್ಲ್ಸ್(ಹಿಂದಿ-ಇಂಗ್ಲಿಷ್), ಪುತುಲ್(ಬಂಗಾಳಿ) ಮತ್ತು ಅನುಜ(ಹಿಂದಿ) ಚಿತ್ರಗಳು ನಾಮಿನೇಷನ್ ಪ್ರಕ್ರಿಯೆಗೆ ಸ್ಪರ್ಧೆಯಲ್ಲಿರುವ ಭಾರತೀಯ ಅಥವಾ ಭಾರತದ ಪ್ರತಿಭೆಗಳು ನಟಿಸಿರುವ ಚಿತ್ರಗಳಾಗಿವೆ.

Next Article