ಇಂದು ಪದಕ ನಿರೀಕ್ಷೆ
ಪ್ಯಾರಿಸ್: ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್ ಎದುರು ೪-೨ ಅಂತರದಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿರುವ ಭಾರತದ ಹಾಕಿ ಪಡೆ, ಇಂದು ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ ಕಾದಾಡಲಿದೆ. ಫೈನಲ್ ಪ್ರವೇಶ ಪಡೆದರೆ ಬೆಳ್ಳಿ ಪದಕ ಖಚಿತವಾಗಿದ್ದು, ಜರ್ಮನಿ ವಿರುದ್ಧ ಗೆಲುವು ಅನಿವಾರ್ಯವಾಗಿದೆ.
ಕ್ವಾರ್ಟರ್ ಫೈನಲ್‌ನಲ್ಲಿ ಅರ್ಜಿಂಟೀನಾ ವಿರುದ್ಧ ಜರ್ಮನಿ ಗೆಲುವು ಸಾಧಿಸಿ, ಸೆಮಿಸ್‌ಗೆ ಬಂದಿದೆ. ಈ ಮುಂಚೆ ಭಾರತ ತಂಡ ಜರ್ಮನಿ ವಿರುದ್ಧ ೧೮ ಬಾರಿ ಮುಖಾಮುಖಿಯಾಗಿದ್ದು ೮ ಬಾರಿ ಬಾರಿ ಭಾರತ ಗೆದ್ದಿದೆ.
ಸೇನ್‌ಗೆ ಸೋಲು: ಇನ್ನು ಕಂಚಿನ ಪದಕಕ್ಕೆ ನಡೆದ ಪಂದ್ಯದಲ್ಲಿ ಲಕ್ಷ್ಯ ಸೇನ್, ಮಲೇಶ್ಯಾದ ಲೀ ಜಿ ಜಿಯಾ ವಿರುದ್ಧ ೨೧-೧೩, ೧೬-೨೧, ೧೧-೨೧ ಅಂತರದಿಂದ ಸೋತರು.
ಚಿನ್ನಕ್ಕೆ ಗುರಿ: ಇಂದು ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಮಹತ್ವದ ಸ್ಪರ್ಧೆಯಿದ್ದು, ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್ ಚೋಪ್ರಾ ತಮ್ಮ ಚಿನ್ನದ ಬೇಟೆ ಆರಂಭಿಸಲಿದ್ದಾರೆ. ಮಧ್ಯಾಹ್ನ ೩.೨೦ಕ್ಕೆ ಆರಂಭಗೊಳ್ಳಲಿರುವ ಈ ಸ್ಪರ್ಧೆಯಲ್ಲಿ ಭಾರತದ ಪದಕ ನಿರೀಕ್ಷೆಯನ್ನಿಟ್ಟುಕೊಂಡಿದೆ.