ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಂಧನ ಕ್ಷೇತ್ರದಲ್ಲಿ ಭಾರಿ ಹೂಡಿಕೆ

01:45 AM Feb 07, 2024 IST | Samyukta Karnataka

ಪಣಜಿ: ಭಾರತದ ಇಂಧನ ಕ್ಷೇತ್ರ ಹಿಂದೆಂದೂ ನೋಡದಂಥ ಪ್ರಗತಿ ಕಾಣಲಿದ್ದು, ಈ ಕ್ಷೇತ್ರದಲ್ಲಿ ಮುಂದಿನ ಐದಾರು ವರ್ಷಗಳಲ್ಲಿ ೬೭ ಬಿಲಿಯನ್ ಡಾಲರ್ ಹೂಡಿಕೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದಕ್ಷಿಣ ಗೋವಾದ ಮಡಗಾಂವ ಸಮೀಪದ ಬೇತುಲ್‌ನಲ್ಲಿ ಭಾರತ ಇಂಧನ ಸಪ್ತಾಹ ೨೦೨೪ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಇಂಧನ ಸಂಸ್ಕರಣಾ ಸಾಮರ್ಥ್ಯ ೨೦೩೦ರ ವೇಳೆಗೆ ವಾರ್ಷಿಕ ೨೫೪ ದಶಲಕ್ಷ ಟನ್‌ನಿಂದ ೪೫೦ ದಶಲಕ್ಷ ಟನ್‌ಗೆ ಹೆಚ್ಚ ಳವಾಗಲಿದೆ ಎಂದರು. ವಿದ್ಯುತ್ ಬೇಡಿಕೆ ೨೦೪೫ರ ಹೊತ್ತಿಗೆ ದ್ವಿಗುಣಗೊಳ್ಳಲಿದೆ. ಇದಕ್ಕಾಗಿ ಸಿದ್ಧತೆ ನಡೆಸಲಾಗಿದೆ ಎಂದು ವಿವರಿಸಿದರು. ಎಥೆನಾಲ್ ಮಿಶ್ರಣ ಪ್ರಮಾಣ ಹೆಚ್ಚಿರುವುದು ಹಾಗೂ ಸೌರಶಕ್ತಿ ಉತ್ಪಾದನೆ ಹೆಚ್ಚಳವಾಗುತ್ತಿರುವುದರ ಕುರಿತು ಅಂಕಿ ಅಂಶಗಳ ಮೂಲಕ ಮಾಹಿತಿ ನೀಡಿದರು.
ಬೇಡಿಕೆ ಹೆಚ್ಚಿದ್ದರೂ ಕಡಿಮೆ ವೆಚ್ಚದಲ್ಲಿ ಇಂಧನವನ್ನು ದೇಶದ ಮೂಲೆ ಮೂಲೆಗೂ ತಲುಪಿಸಲಾಗುತ್ತಿದೆ. ವಿದ್ಯುತ್ ಪೂರೈಕೆಯಲ್ಲೂ ಶೇ.೧೦೦ರ ಗುರಿಯನ್ನು ತಲುಪಿದ್ದೇವೆ. ದೇಶದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳು, ರೈಲ್ವೆಗಳು ಅಥವಾ ಇತರ ಮೂಲ ಸೌಕರ್ಯಗಳಿಗೆ ಶಕ್ತಿಯ ಅಗತ್ಯವಿದೆ ಎಂದು ಮೋದಿ ಹೇಳಿದರು.
ಭಾರತವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವದಾದ್ಯಂತದ ತಜ್ಞರು ನಂಬಿದ್ದಾರೆ. ಈ ವರ್ಷದ ಕೊನೆಯ ಆರು ತಿಂಗಳಲ್ಲಿ ಭಾರತದ ಜಿಡಿಪಿ ಶೇಕಡಾ ೭.೫ಕ್ಕಿಂತ ಹೆಚ್ಚಲಿದೆ. ಈ ದರವು ಜಾಗತಿಕ ಬೆಳವಣಿಗೆಯ ಮುನ್ಸೂಚನೆಗಿಂತ ಹೆಚ್ಚಾಗಿದೆ. ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ದೇಶವು ಇದೇ ರೀತಿಯ ಪ್ರಗತಿ ಸಾಧಿಸುತ್ತದೆ ಎಂದು ಐಎಂಎಫ್ ಕೂಡ ಭವಿಷ್ಯ ನುಡಿದಿದೆ ಎಂದರು.
ಇದೇ ಸಂದರ್ಭದಲ್ಲಿ ಗೋವಾದಲ್ಲಿ ಒಎನ್‌ಜಿಸಿ ಸೀ ಸರ್ವೈವಲ್ ಕೇಂದ್ರವನ್ನು ಉದ್ಘಾಟಿಸಿದರು. ಸಮುದ್ರದಲ್ಲಿ ವಿಕೋಪ ಪರಿಸ್ಥಿತಿಯಲ್ಲಿ ಬದುಕುಳಿಯುವ ತರಬೇತಿಯನ್ನು ಈ ಕೇಂದ್ರ ನೀಡಲಿದೆ. ಪ್ರತಿ ವರ್ಷ ೧೦,೦೦೦-೧೫,೦೦೦ ಉದ್ಯೋಗಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

Next Article