ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಇಳಕಲ್ ಸೀರೆಯಲ್ಲಿ ಕಪ್ ನಮ್ದೇ..!

04:12 PM May 19, 2024 IST | Samyukta Karnataka

ಬಾಗಲಕೋಟೆ: ಕೈಮಗ್ಗದ ಸೀರೆಯಲ್ಲಿ ನಾನಾ ರೀತಿಯ ಕಲೆಯನ್ನು ಪ್ರದರ್ಶನ ಮಾಡಿದ ಇಲ್ಲಿನ ನೇಕಾರ ಮೇಘರಾಜ ಗುದ್ದಾಟಿ ಆರ್‌ಸಿಬಿ ತಂಡ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುತ್ತಿದ್ದ ಹಾಗೇಯೇ ಈ ಸಲ ಕಪ್ ನಮ್ದೇ ಎಂದು ನೇಯ್ದ ಸೀರೆಯನ್ನು ಮಗಳಿಗೆ ಉಡಿಸಿ ಸಂಭ್ರಮಪಟ್ಟಿದ್ದಾರೆ.
ಹೌದು, ಶನಿವಾರದಂದು ರಾತ್ರಿ ನಡೆದ ಚೆನೈ-ಬೆಂಗಳೂರು ಪಂದ್ಯದಲ್ಲಿ ಬೆಂಗಳೂರು ೨೭ ರನ್‌ಗಳಿಂದ ಪ್ಲೇ ಆಫ್ ಹಂತಕ್ಕೆ ಹೋದ ಕೂಡಲೇ ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. "ಆರ್‌ಸಿಬಿ.. ಈ ಸಲ ಕಪ್ ನಮ್ದೇ, ನಮ್ಮ ಬೆಂಗಳೂರು" ಎಂದು ಬರೆದ ಸೀರೆಯನ್ನು ಮಗಳಿಗೆ ಉಡಿಸಿ ಅದನ್ನು ಎಲ್ಲೆಡೆ ಹಂಚಿಕೊಂಡಿದ್ದಾರೆ.

Next Article