ಇವಿಎಂ-ವಿವಿಪ್ಯಾಟ್ ತಾಳೆ
01:43 PM Apr 18, 2024 IST
|
Samyukta Karnataka
ನವದೆಹಲಿ: ವಿವಿಪ್ಯಾಟ್ ಚೀಟಿಗಳನ್ನು ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಮೂಲಕ ಚಲಾಯಿಸಿದ ಮತಗಳೊಂದಿಗೆ ತಾಳೆ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಸಿದ ಸುಪ್ರೀಂ ಕೋರ್ಟ್.
ಇವಿಎಂ ಹಾಗೂ ವಿವಿಪ್ಯಾಟ್ಗಳ ಕಾರ್ಯನಿರ್ವಹಣೆ, ತಾಳೆ, ಪರಿಶೀಲನೆಯ ಪ್ರಕ್ರಿಯೆಯ ಕುರಿತು ವಿವರಣೆ ನೀಡಬೇಕು” ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಾಂಕರ್ ದತ್ತ ಅವರಿದ್ದ ನ್ಯಾಯಪೀಠವು ಸೂಚಿಸಿತು.
ಕೇರಳದ ಕಾಸರಗೋಡಿನಲ್ಲಿ ಮತದಾನ ಪ್ರಕ್ರಿಯೆಯ ಅಣಕು ಪ್ರದರ್ಶನದ ವೇಳೆ ಇವಿಎಂ ಮತ್ತು ವಿವಿಪ್ಯಾಟ್ಗೂ ತಾಳೆಯಾಲಿಲ್ಲ ಎಂಬುದಾಗಿ ಪ್ರಶಾಂತ್ ಭೂಷಣ್ ಅವರು ಕೋರ್ಟ್ ಗಮನಕ್ಕೆ ತಂದರು. ಆಗ ನ್ಯಾಯಾಲಯವು ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿತು.
Next Article