For the best experience, open
https://m.samyuktakarnataka.in
on your mobile browser.

ಇಸ್ರೋ ಪ್ರೊಬಾ -3 ಉಡಾವಣೆ ನಾಳೆಗೆ ಮುಂದೂಡಿದ ISRO

05:17 PM Dec 04, 2024 IST | Samyukta Karnataka
ಇಸ್ರೋ ಪ್ರೊಬಾ  3 ಉಡಾವಣೆ ನಾಳೆಗೆ ಮುಂದೂಡಿದ isro

ಬೆಂಗಳೂರು: ಇಸ್ರೋದ ಪ್ರೊಬಾ -3 ಮಿಷನ್ ಉಡಾವಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಈ ಕುರಿತಂತೆ ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಪತ್ತೆಯಾಗಿದ್ದರಿಂದ ಮಿಷನ್ ಮುಂದೂಡಲಾಗಿದೆ ನಾಳೆ ಗುರುವಾರ ಡಿಸೆಂಬರ್ 5 ರಂದು ಭಾರತೀಯ ಕಾಲಮಾನ 16:12ಕ್ಕೆ ಮಿಷನ್ ಉಡಾವಣೆಯಾಗಲಿದೆ ಎಂದು ತಿಳಿಸಿದೆ. ಕೃತಕ ಸೂರ್ಯ ಗ್ರಹಣಗಳನ್ನು ಸೃಷ್ಟಿಸುವ ಇಎಸ್ಎಯ ಮಹತ್ವಾಕಾಂಕ್ಷಿ, ಐತಿಹಾಸಿಕ ಪ್ರೋಬಾ-3 ಯೋಜನೆ ಸೂರ್ಯನನ್ನು ಹೊಸ ರೀತಿಯಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಿದೆ.

Tags :